ಕರ್ನಾಟಕ

karnataka

ETV Bharat / briefs

ಮೋದಿ ಹೆಸರಿನವರೆಲ್ಲ ಕಳ್ಳರು...ರಾಹುಲ್​ ವಿರುದ್ಧ ‘ಮೋದಿ’ ಮಾನನಷ್ಟ ಮೊಕದ್ದಮೆ..!! - ಸುಶೀಲ್​ ಕುಮಾರ್​ ಮೋದಿ

ಬಹುತೇಕ ಬಹಿರಂಗ ಸಮಾರಂಭಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಇಂತಹ ಪದ ಬಳಕೆ ಮಾಡುತ್ತಿರುವುದರ ಬಗ್ಗೆ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುಶೀಲ್​ ಕುಮಾರ್​ ಮೋದಿ

By

Published : Apr 16, 2019, 12:38 PM IST

ಪಾಟ್ನಾ:ಇತ್ತೀಚೆಗಿನ ಎಲ್ಲ ಚುನಾವಣಾ ರ್ಯಾಲಿಗಳಲ್ಲಿ ಮೋದಿ ಸರ್​ನೇಮ್ ಹೊಂದಿದವರೆಲ್ಲ ಕಳ್ಳರು ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದರು.

ಬಹುತೇಕ ಬಹಿರಂಗ ಸಮಾರಂಭಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಇಂತಹ ಪದ ಬಳಕೆ ಮಾಡುತ್ತಿರುವುದರ ಬಗ್ಗೆ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ರಾಹುಲ್​ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸುಶೀಲ್​ ಕುಮಾರ್ ಮೋದಿ, ಪಾಟ್ನಾ ಕೋರ್ಟ್​ನಲ್ಲಿ ರಾಹುಲ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ. ಮೋದಿ ಸರ್​ನೇಮ್​ ಬಳಕೆ ಮಾಡಿಕೊಂಡಿರುವುದು ಅಪರಾಧವಾಗಿದೆ. ಇದು ಕೋಟ್ಯಂತರ ಜನರ ಮನಸಿಗೆ ನೋವುಂಟು ಮಾಡಿದೆ ಎಂದೂ ಅವರು ಹೇಳಿದ್ದಾರೆ.

ABOUT THE AUTHOR

...view details