ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಪಡೆದಿದೆ.ಇದರಿಂದ ರಾಜ್ಯ ಕಾಂಗ್ರೆಸ್ ಮುಖಭಂಗಕ್ಕೊಳಗಾಗಿದ್ದು, ಇದೇ ವಿಷಯವಾಗಿ ಪಕ್ಷದ ಟ್ರಬಲ್ ಶೂಟರ್ ಡಿಕೆಶಿ ಮಾತನಾಡಿದ್ದಾರೆ.
ಚುನಾವಣಾ ಫಲಿತಾಂಶಕ್ಕೂ ಮುನ್ನ ವಿದೇಶಕ್ಕೆ ಹಾರಿದ್ದ ಡಿಕೆಶಿ ಬೆಂಗಳೂರಿಗೆ ವಾಪಸ್ ಆಗಿದ್ದು, ಕಾಂಗ್ರೆಸ್ ಸೋಲಿನ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಕೆಟ್ಟದನ್ನು ಕೇಳಲಾರೆ,ನೋಡಲಾರೆ,ಆಡಲಾರೆ-ಡಿಕೆಶಿ ಪ್ರತಿಕ್ರಿಯೆ!
ಚುನಾವಣೆಯಲ್ಲಿ ಪಕ್ಷ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೋಲು ಕಾಣುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಇದೀಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದ್ದು, ಪಕ್ಷದ ಮುಖಂಡರನ್ನ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ನಾಶವಾಗಲು ಬಿಡುವುದಿಲ್ಲ. ಗಾಂಧಿ ಕುಟುಂಬ ಸದಾ ಪಕ್ಷದ ಏಳಿಗೆಗಾಗಿ ದುಡಿಯುತ್ತಿದೆ ಎಂದು ತಿಳಿಸಿದರು.