ಬೆಂಗಳೂರು: ಹಲವು ಶಾಸಕರ ರೀತಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಕುರಿತು ನಮ್ಮ ನಾಯಕರು ಮಾತನಾಡ್ತಾರೆ. ನನಗೇ ಸಚಿವ ಸ್ಥಾನ ಕೊಡಿ ಅಂತ ಡಿಮ್ಯಾಂಡ್ ಮಾಡ್ತಿಲ್ಲ ಎಂದು ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ನಾನೂ ಸಚಿವ ಸ್ಥಾನದ ಆಕಾಂಕ್ಷಿ.. ಆದರೆ ಮಂತ್ರಿಗಿರಿಗಾಗಿ ಹಠ ಹಿಡಿದಿಲ್ಲ: ಅಜಯ್ ಸಿಂಗ್
ನನಗೆ ಸಚಿವ ಸ್ಥಾನ ಕೊಟ್ಟು, ಯಾರನ್ನೋ ಕೈಬಿಡಿ ಅಂತ ಹೇಳ್ತಿಲ್ಲ. ಸಚಿವ ಸ್ಥಾನಕ್ಕಾಗಿ ಹಿಂದೆಯೂ ನಮ್ಮ ಬೇಡಿಕೆಯಿತ್ತು. ಈಗಲೂ ಇದೆ. ಕಲಬುರಗಿಯಲ್ಲಿ ಹೆಚ್ಚಿನ ಅವಕಾಶ ಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ ಎಂದು ಅಜಯ್ ಸಿಂಗ್ ತಮ್ಮ ಅನಿಸಿಕೆಯನ್ನ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಜಯ್ ಸಿಂಗ್, ನನಗೆ ಸಚಿವ ಸ್ಥಾನ ಕೊಟ್ಟು, ಯಾರನ್ನೋ ಕೈಬಿಡಿ ಅಂತ ಹೇಳ್ತಿಲ್ಲ. ಸಚಿವ ಸ್ಥಾನಕ್ಕಾಗಿ ಹಿಂದೆಯೂ ನಮ್ಮ ಬೇಡಿಕೆಯಿತ್ತು. ಈಗಲೂ ಇದೆ. ಕಲಬುರಗಿಯಲ್ಲಿ ಹೆಚ್ಚಿನ ಅವಕಾಶ ಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ, ಕೊಡಲೇಬೇಕೆಂದು ಹಠ ಹಿಡಿದಿಲ್ಲ ಎಂದು ಹೇಳಿದರು.
ಸಚಿವ ಪ್ರಿಯಾಂಕ ಖರ್ಗೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮಗೊಂದು ಅವಕಾಶ ಮಾಡಿಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ. ಜಿಲ್ಲೆಗೆ ಎಷ್ಟು ಸ್ಥಾನ ಕೊಡಬೇಕು ಅನ್ನೋದು ಪಕ್ಷದ ನಾಯಕರು ಚರ್ಚಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಪ್ರಿಯಾಂಕ ಖರ್ಗೆ ಅವರಿಗೆ ಸಚಿವ ಸ್ಥಾನ ತೆಗೆದು ನನಗೆ ಕೊಡಿ ಅಂತ ಕೇಳಿಲ್ಲ. ಆದರೆ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡ್ತೀನಿ ಎಂದರು.