ರಾಯಚೂರು:ಮುಸ್ಲಿಮರ ಪವಿತ್ರ ಮಾಸಗಳಲ್ಲಿ ರಂಜಾನ್ ಕೂಡ ಒಂದು. ಈ ತಿಂಗಳಲ್ಲಿ ಮುಸ್ಲಿಮ ಬಾಂಧವರು ಒಂದು ತಿಂಗಳ ಕಾಲ ಉಪವಾಸ (ರೋಜಾ) ಮಾಡುವುದು ಸರ್ವೆ ಸಾಮಾನ್ಯ. ಸಂಜೆ ಉಪವಾಸ ಬಿಡುವಾಗ ವಿವಿಧ ಫಲಹಾರ ಸೇವೆ ಮಾಡುವ ಇವರು ಹೆಚ್ಚಾಗಿ ಖರ್ಜೂರ್ ಖರೀದಿ ಮಾಡುತ್ತಾರೆ.
ರಂಜಾನ್ ಸಂಭ್ರಮ: ಮಾರುಕಟ್ಟೆಯಲ್ಲಿ ಖರ್ಜೂರ್ ಮಾರಾಟ ಬಲು ಜೋರು - ಮಾರುಕಟ್ಟೆ
ದೇಹಕ್ಕೆ ಹೆಚ್ಚು ಶಕ್ತಿ ನೀಡುವ ಖರ್ಜೂರ್ ಹೆಚ್ಚು ಸೇವನೆ ಮಾಡುವುದರಿಂದ ನಗರದಲ್ಲಿ ವಿವಿಧೆಡೆ ಹಣ್ಣಿನ ವ್ಯಾಪಾರಿಗಳು ದೈನಂದಿನ ಹಣ್ಣುಗಳ ಜೊತೆಗೆ ಖರ್ಜೂರ ಹಣ್ಣು ತಂದು ಮಾರಾಟ ಮಾಡಿ ಲಾಭಗಳಿಸುತ್ತಿದ್ದಾರೆ.
ದೇಹಕ್ಕೆ ಹೆಚ್ಚು ಶಕ್ತಿ ನೀಡುವ ಖರ್ಜೂರ್ ಹೆಚ್ಚು ಸೇವನೆ ಮಾಡುವುದರಿಂದ ನಗರದಲ್ಲಿ ವಿವಿಧೆಡೆ ಹಣ್ಣಿನ ವ್ಯಾಪಾರಿಗಳು ದೈನಂದಿನ ಹಣ್ಣುಗಳ ಜೊತೆಗೆ ಖರ್ಜೂರ್ ಹಣ್ಣು ತಂದು ಮಾರಾಟ ಮಾಡಿ ಲಾಭಗಳಿಸುತ್ತಿದ್ದಾರೆ. ಇದರ ಮಾರಾಟ ಕೂಡ ಬಲು ಜೋರಾಗಿ ನಡೆದಿದೆ.
ನಗರದ ಗಂಜ್,ಚಂದ್ರಮೌಳೇಶ್ವರ ರಸ್ತೆ, ಬಸ್ಸ್ಟ್ಯಾಂಡ್,ಸ್ಟೇಷನ್ ರಸ್ತೆ ಸೇರಿ ವಿವಿಧ ಪ್ರದೇಶಗಳಲ್ಲಿ ತಳ್ಳುವ ಬಂಡಿಗಳಲೂ ಇದರ ಮಾರಾಟ ಜೋರಾಗಿದೆ. ಇನ್ನು ಹಣ್ಣಿನ ಮಾರಾಟಗಾರರು ಬಗೆಬಗೆಯ ಹಣ್ಣು ಮಾರಾಟ ಮಾಡುವುದರ ಜತೆಗೆ ಖರ್ಜೂರ್ ಕೂಡ ಮಾರಾಟ ಮಾಡುತ್ತಿದ್ದಾರೆ. ಪ್ರಮುಖವಾಗಿ ಇರಾನಿ, ಬರಾರಿ ಸೇರಿದಂತೆ ವಿವಿಧ ಬಗೆಯ ಖರ್ಜೂರ್ ಮಾರಾಟವಾಗುತ್ತಿದ್ದು, ಕೆಜಿಗೆ 70ರಿಂದ ಸಾವಿರದವರೆಗೆ ಬೆಲೆ ಇದೆ.