ಹುಬ್ಬಳ್ಳಿ: ಮಾನಸಿಕ ಅಸ್ವಸ್ಥನಾಗಿ ತಿರುಗುತ್ತಿದ್ದ 12 ವರ್ಷದ ಬಾಲಕನನ್ನು ತಾಯಿ ಮಡಲಿಗೆ ಸೇರಿಸುವ ಮೂಲಕ ಉಪನಗರ ಪೊಲೀಸ್ ಠಾಣೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ತಾಯಿ-ಮಗನನ್ನು ಒಂದುಗೂಡಿಸಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ - Hubli Sub urban Police Station news
ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥ ಬಾಲಕನನ್ನು ಮರಳಿ ತಾಯಿ ಮಡಲಿಗೆ ಸೇರಿಸುವ ಕಾರ್ಯವನ್ನು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಸಿಬ್ಬಂದಿ ಮಾಡಿದ್ದಾರೆ.
![ತಾಯಿ-ಮಗನನ್ನು ಒಂದುಗೂಡಿಸಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ Hubli police](https://etvbharatimages.akamaized.net/etvbharat/prod-images/768-512-09:21:10:1599191470-kn-hbl-01-tayi-maganannu-ondu-madida-police-sibbandi-av-ka10025-04092020091508-0409f-1599191108-922.jpg)
Hubli police
ವಿದ್ಯಾನಗರದ ಸಿದ್ದಪ್ಪ ಹೊಸಮನಿ ಎಂಬ ಮಾನಸಿಕ ಅಸ್ವಸ್ಥ ಬಾಲಕ ನಿನ್ನೆ ಮನೆಯಿಂದ ಕಾಣೆಯಾಗಿದ್ದ. ಈ ಸಂದರ್ಭದಲ್ಲಿ ಉಪನಗರ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ತಿರುಗುವಾಗ ಅಸ್ವಸ್ಥ ಬಾಲಕನನ್ನು ಕಂಡು ಮರಳಿ ತಾಯಿ ಬಳಿ ಸೇರುವಂತೆ ಮಾಡಿದ್ದಾರೆ.
ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿ ಉಮೇಶ, ರಾಘವೇಂದ್ರ, ಸುಂಕದ ಹಾಗೂ ಮಡಿವಾಳರ ಅವರು ಬಾಲಕನನ್ನು ಅವರ ತಾಯಿ ಕಮಲವ್ವ ಹೊಸಮನಿ ಬಳಿ ಸೇರಿಸುವ ಕಾರ್ಯ ಮಾಡಿದ್ದಾರೆ.