ಕರ್ನಾಟಕ

karnataka

ETV Bharat / briefs

ಮೋದಿ ಬಯೋಪಿಕ್​ನಿಂದ ​​​ ಒಬೇರಾಯ್​​ಗೆ ಅಚ್ಛೇ ದಿನ್​​​.... ಸೆಕೆಂಡ್​ ಇನ್ನಿಂಗ್ಸ್​​ನಲ್ಲಿ ಸಿಕ್ಸರ್ ಬಾರಿಸಿದ ಕರ್ನಾಟಕದ ಅಳಿಯ

ಚುನಾವಣಾ ನೀತಿ ಸಂಹಿತೆ, ವಿಪಕ್ಷಗಳ ಪ್ರತಿರೋಧದ ನಡುವೆ ಮೋದಿ ಬಯೋಪಿಕ್​ ಬಿಡುಗಡೆ ಒಂದೂವರೆ ತಿಂಗಳು ಮುಂದೂಡಲ್ಪಟ್ಟು ಕೊನೆಗೂ ಮೇ 24ರಂದು ವಿಶ್ವಾದ್ಯಂತ ತೆರೆಕಂಡಿತ್ತು.

ವಿವೇಕ್​​​​ ಒಬೇರಾಯ್

By

Published : May 28, 2019, 8:48 PM IST

ಹಲವು ಅಡೆತಡೆಗಳನ್ನು ಎದುರಿಸಿ ಕೊನೆಗೂ ಥಿಯೇಟರ್ ಕದ ತಟ್ಟಿರುವ ನರೇಂದ್ರ ಮೋದಿ ಬಯೋಪಿಕ್​ ಮೊದಲ ವಾರಾಂತ್ಯಕ್ಕೆ ಉತ್ತಮ ಗಳಿಕೆ ಕಂಡಿದೆ.

ಚುನಾವಣಾ ನೀತಿ ಸಂಹಿತೆ, ವಿಪಕ್ಷಗಳ ಪ್ರತಿರೋಧದ ನಡುವೆ ಮೋದಿ ಬಯೋಪಿಕ್​ ಬಿಡುಗಡೆ ಒಂದೂವರೆ ತಿಂಗಳು ಮುಂದೂಡಲ್ಪಟ್ಟು ಕೊನೆಗೂ ಮೇ 24ರಂದು ವಿಶ್ವಾದ್ಯಂತ ತೆರೆಕಂಡಿತ್ತು.

ಕಳೆದ ಶುಕ್ರವಾರ ಬಿಡುಗಡೆಯಾದ ನರೇಂದ್ರ ಮೋದಿ ಬಯೋಪಿಕ್​​​ ಮೊದಲ ವಾರಾಂತ್ಯಕ್ಕೆ 11.76 ಕೋಟಿ ಗಳಿಕೆ ಮಾಡಿದೆ. ಶುಕ್ರವಾರ 2.88 ಕೋಟಿ, ಶನಿವಾರ 3.76 ಕೋಟಿ, ಭಾನುವಾರ 5.12 ಕೋಟಿ ಕಲೆಕ್ಷನ್ ಮಾಡಿದೆ.

'83' ಚಿತ್ರಕ್ಕೆ ರಣ್​ವೀರ್ ತಯಾರಿ ಹೇಗಿದೆ ?

ವಿವೇಕ್ ಒಬೇರಾಯ್​​​ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿವೇಕ್ ಒಬೇರಾಯ್​​​ ನಾಯಕನಾಗಿ ನಟಿಸಿದ ಚಿತ್ರಗಳಲ್ಲಿ ಯಾವುದೂ ಸಹ ಹತ್ತು ಕೋಟಿ ಗಳಿಸಿದ ನಿದರ್ಶನಗಳಿಲ್ಲ. ಹೀಗಾಗಿ ಮೋದಿ ಸಿನಿಮಾ ವಿವೇಕ್​​ ಕರಿಯರ್​​ಗೆ ಅಚ್ಛೇ ದಿನ್ ತಂದಿದೆ ಎನ್ನುವ ಮಾತು ಸದ್ಯ ಬಿಟೌನ್​ನಲ್ಲಿ ಕೇಳಿಬರುತ್ತಿದೆ.

2002ರಲ್ಲಿ ರಾಮ್​​ಗೋಪಾಲ್ ವರ್ಮಾ ನಿರ್ದೇಶನದ ಕಂಪನಿ ಸಿನಿಮಾದ ಮೂಲಕ ಬಾಲಿವುಡ್​ ಜರ್ನಿ ಆರಂಭಿಸಿದ್ದ ವಿವೇಕ್ ಒಬೇರಾಯ್​​​ ಭವಿಷ್ಯದ ಸೂಪರ್​​ಸ್ಟಾರ್ ಆಗುವ ಸೂಚನೆ ನೀಡಿದ್ದರು.

ಸಾಥಿಯಾ, ಯುವ, ಓಂಕಾರ, ಪ್ಯಾರೇ ಮೋಹನ್​​, ಪ್ರಿನ್ಸ್​​ ಸಿನಿಮಾಗಳ ಮೂಲಕ ವಿವೇಕ್​ ಎಲ್ಲರ ಗಮನ ಸೆಳೆದಿದ್ದರು. ಆದರೆ ಕಲೆಕ್ಷನ್ ವಿಚಾರದಲ್ಲಿ ಈ ಎಲ್ಲ ಚಿತ್ರಗಳು ಮಕಾಡೆ ಮಲಗಿದ್ದವು. 2013ರಲ್ಲಿ ಜಯಂತ್​​​ಭಾಯ್​​ ಕಿ ಲವ್​ ಸ್ಟೋರಿ ಮೂಲಕ ಕಂಬ್ಯಾಕ್ ಮಾಡಿದ್ದ ವಿವೇಕ್​ ಒಬೇರಾಯ್​​ರನ್ನು​​ ಮತ್ತೆ ಸೋಲು ಬಿಗಿದಪ್ಪಿತ್ತು.

ಮರು ಹುಟ್ಟು ನೀಡಿದ ಮೋದಿ ಬಯೋಪಿಕ್​​:

ವಿವೇಕ್ ಒಬೇರಾಯ್​​ ಸಿನಿ ಕರಿಯರ್ ಮುಗಿದೇ ಹೋಯ್ತು ಎನ್ನುವಾಗ ನರೇಂದ್ರ ಮೋದಿ ಬಯೋಪಿಕ್​​ ಮರು ಹುಟ್ಟು ನೀಡಿದೆ. ನಾಲ್ಕು ದಿನದಲ್ಲಿ 13 ಕೋಟಿ ಹಣವನ್ನು ನಿರ್ಮಾಪಕರ ಜೋಳಿಗೆ ತುಂಬಿಸಿದೆ. ಮೋದಿ ಬಯೋಪಿಕ್​ ನಿಧಾನವಾಗಿ ಸಿನಿ ಪ್ರಿಯರನ್ನು ಥಿಯೇಟರ್​​ನತ್ತ ಕರೆತರುತ್ತಿದ್ದು ಇದು ವಿವೇಕ್ ಒಬೇರಾಯ್​​ ಸೇರಿದಂತೆ ಇಡೀ ತಂಡಕ್ಕೆ ಖುಷಿ ತಂದಿದೆ. ತಮ್ಮ ಹದಿನೈದು ವರ್ಷದ ಸಿನಿ ಕರಿಯರ್​ನಲ್ಲಿ ಮೋದಿ ಬಯೋಪಿಕ್ ಮೂಲಕ ವಿವೇಕ್ ಒಬೇರಾಯ್​ ಸಕ್ಸಸ್​ ರುಚಿ ಕಂಡಿದ್ದಾರೆ.

ABOUT THE AUTHOR

...view details