ನ್ಯೂಯಾರ್ಕ್:ಸಮಾಜದ ಪ್ರತಿಯೊಂದು ಆಗೂಹೋಗುಗಳಿಗೂ ತಕ್ಷಣವೇ ಸ್ಪಂದಿಸುವ ಸಾಮಾಜಿಕ ಜಾಲತಾಣವನ್ನು ಇಂದು ಆವರಿಸಿದ್ದು ಮೆಟ್ಗಾಲಾ.
ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಜನಪ್ರಿಯ ತಾರೆಗಳ ಚಿತ್ರ-ವಿಚಿತ್ರ ಸ್ಟೈಲ್ ಏಕಾಏಕಿ ಸುದ್ದಿಯಾದ ಮೆಟ್ಗಾಲಾ ಇವೆಂಟ್ ಬಗ್ಗೆ ನಿಮಗೆ ತಿಳಿಯದ ಸಂಗತಿ ಇಲ್ಲಿದೆ...
ಮೆಟ್ಗಾಲಾ ಎನ್ನುವುದು ಪ್ರತಿವರ್ಷ ನಡೆಯುವ ಫ್ಯಾಷನ್ ಇವೆಂಟ್. ಸಂಗೀತ, ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳ ಖ್ಯಾತನಾಮರು ಮೆಟ್ಗಾಲಾ ಇವೆಂಟ್ನಲ್ಲಿ ಪಾಲ್ಗೊಳ್ಳುತ್ತಾರೆ. ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಪ್ರತಿವರ್ಷ ಆಯೋಜನೆ ಮಾಡಲಾಗುತ್ತದೆ.
ಮೆಟ್ನಲ್ಲಿ ಫ್ಯಾಷನ್ ಕಲೆಕ್ಷನ್ಗಾಗಿ ನಿಧಿ ಸಂಗ್ರಹಣೆಗಾಗಿ ಇವೆಂಟ್ ಆಯೋಜಿಸಲಾಗುತ್ತಿದ್ದು, ಪ್ರತಿವರ್ಷವೂ ವಿಭಿನ್ನ ಥೀಮ್ ನೀಡಲಾಗುತ್ತದೆ. ನೋಟ್ಸ್ ಆನ್ ಫ್ಯಾಷನ್ ಎನ್ನುವುದು ಈ ಬಾರಿಯ ಥೀಮ್ ಆಗಿತ್ತು.
ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಲೇಡಿ ಗಾಗಾ ಹಾಗೂ ಸೋಫಿಯಾ ಟರ್ನರ್ ತಮ್ಮ ವಿಶೇಷ ವೇಷ ಭೂಷಣದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಜೊತೆಗೆ ಇಂಟರ್ನೆಟ್ನಲ್ಲಿ ಸಖತ್ ಟ್ರೋಲ್ ಸಹ ಆಗಿದ್ದಾರೆ.