ಕರ್ನಾಟಕ

karnataka

ETV Bharat / briefs

ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಮ್​​ ಹೇಗಿದೆ? ಹಾರ್ದಿಕ್ ಪಾಂಡ್ಯ ವಿವರಿಸಿದ್ದಾರೆ ನೋಡಿ - ಲಂಡನ್​

ಲಂಡನ್‌ನಲ್ಲಿ ಟೀಂ ಇಂಡಿಯಾದ ಡ್ರೆಸ್ಸಿಂಗ್​ ರೂಂ ಹೇಗಿದೆ ಎನ್ನುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಹಾರ್ದಿಕ್​ ಪಾಂಡ್ಯ ಪೂರ್ತಿ ವಿವರ ಕೊಟ್ಟಿದ್ದಾರೆ ನೋಡಿ

ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಂ

By

Published : Jun 15, 2019, 4:31 PM IST

ಲಂಡನ್​:ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರ ಡ್ರೆಸ್ಸಿಂಗ್‌ ರೂಂ ಹೇಗಿರುತ್ತದೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಈ ಬಗ್ಗೆ ಟೀಂ ಇಂಡಿಯಾದ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಸಂಪೂರ್ಣ ವಿವರ ನೀಡಿದ್ದಾರೆ.

ಟೀಂ ಇಂಡಿಯಾ ತಂಡ ಯಾವ ರೀತಿಯ ಡ್ರೆಸ್ಸಿಂಗ್​ ರೂಮ್​ ಹೊಂದಿದೆ ಎಂಬುದರ ಮಾಹಿತಿಯನ್ನು ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಪರಿಚಯ ಮಾಡಿಕೊಟ್ಟಿದ್ದಾರೆ. ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಂನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಸಾಮಗ್ರಿ ಇಡಲು ಪ್ರತ್ಯೇಕ ಸ್ಥಳಾವಕಾಶವಿದೆ.

ತಂಡದ ಆಟಗಾರರ ಭಾವಚಿತ್ರವಿರುವ ಫೋಟೋಗಳನ್ನು ಗೋಡೆಗಳಲ್ಲಿ ಅಂಟಿಸಿ ಆಯಾ ಜಾಗದಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಹಾಗೂ ತಮ್ಮ ಕ್ರಿಕೆಟ್‌ ಸಾಮಾಗ್ರಿಗಳನ್ನಿಡಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ ತಂಡದ ಸದಸ್ಯರು ಒಟ್ಟಿಗೆ ಟಿವಿ ನೋಡಲು ಅವಕಾಶವಿದೆ. ಎಲ್ಲರೂ ಟಿವಿ ನೋಡುತ್ತಿದ್ದರೆ, ಧೋನಿ ಮಾತ್ರ ಕೂಲ್​ ಆಗಿ ನಿದ್ರೆಗೆ ಜಾರಿರುವ ವಿಡಿಯೋ ಇದರಲ್ಲಿದೆ. ಇದರ ಮಧ್ಯೆ ತಂಡದ ಪಿಸಿಯೋ ಕೂಡ ಗಾಯಾಳು ಆಟಗಾರರ ಚಿಕಿತ್ಸೆಗೆ ಇಲ್ಲವೇ ಮಸಾಜ್ ಮಾಡಬೇಕಾದರೆ ಯಾವ ರೂಮ್ ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details