ಕರ್ನಾಟಕ

karnataka

ETV Bharat / briefs

ಹಾಟ್​​ಸ್ಟಾರ್​​​ನಲ್ಲಿ ಐಪಿಎಲ್​​ ಫೈನಲ್‌ನ​____ಲಕ್ಷ ನೋಡಿದರು.. ಹೊಸ ದಾಖಲೆ ಬರೆದ ವೀಕ್ಷಕರ ಸಂಖ್ಯೆ - ಚೆನ್ನೈ ಸೂಪರ್​ ಕಿಂಗ್ಸ್

ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು 12 ಲಕ್ಷದ 7 ಸಾವಿರ ಮಂದಿ ಏಕಕಾಲಕ್ಕೆ ವೀಕ್ಷಣೆ ಮಾಡಿದ್ದರು. ಫೈನಲ್ ಪಂದ್ಯದ ವೇಳೆ ಈ ದಾಖಲೆ ಮೂಲೆ ಸೇರಿದೆ.

ಹಾಟ್​​ಸ್ಟಾರ್​​​

By

Published : May 14, 2019, 12:31 PM IST

Updated : May 14, 2019, 2:40 PM IST

ಹೈದರಾಬಾದ್: ಮಿಲಿಯನ್ ಡಾಲರ್​​ ಟೂರ್ನಿ ಐಪಿಎಲ್​​ಗೆ ತೆರೆಬಿದ್ದಿದೆ. ಕ್ರಿಕೆಟ್ ಅಭಿಮಾನಿಗಳು ಮಾತ್ರ ಫೈನಲ್​​ ಪಂದ್ಯದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಐಪಿಎಲ್​​ ವೀಕ್ಷಣೆಗಾಗಿ ಲಕ್ಷಾಂತರ ಮಂದಿ ನೆಚ್ಚಿಕೊಂಡಿದ್ದ ಹಾಟ್​​ಸ್ಟಾರ್​​ ಇದೇ ಪಂದ್ಯದ ವೇಳೆ ದಾಖಲೆ ಬರೆದಿದೆ.

ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ನಡುವಿನ ಫೈನಲ್​​ ಪಂದ್ಯವನ್ನು 1 ಕೋಟಿ 80 ಲಕ್ಷ ಮಂದಿ ಏಕಕಾಲಕ್ಕೆ ಕಣ್ತುಂಬಿಕೊಂಡಿದ್ದಾರೆ ಎಂದು ಹಾಟ್​ಸ್ಟಾರ್​ ಅಧಿಕೃತವಾಗಿ ಪ್ರಕಟಿಸಿದೆ. ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು 1 ಕೋಟಿಯ 2 7 ಲಕ್ಷ ಮಂದಿ ಏಕಕಾಲಕ್ಕೆ ವೀಕ್ಷಣೆ ಮಾಡಿದ್ದರು. ಫೈನಲ್ ಪಂದ್ಯದ ವೇಳೆ ಈ ದಾಖಲೆ ಮೂಲೆ ಸೇರಿದೆ.

ಹೆಚ್ಚಿನ ಓದಿಗಾಗಿ:

ಬಿಡ್ಡಿಂಗ್​​ನಲ್ಲಿ ಜೇಬಿಗಿಳಿಸಿದ್ದು ಕೋಟಿ ಕೋಟಿ ಹಣ... ಟೂರ್ನಿಯಲ್ಲಿ ಮಾತ್ರ ಫ್ಲಾಪ್​ ಶೋ...!

ಕಳೆದ ವರ್ಷದ ಐಪಿಎಲ್​ಗೆ ಹೋಲಿಕೆ ಮಾಡಿದಲ್ಲಿ ಹಾಟ್​​ಸ್ಟಾರ್​​ನಲ್ಲಿ ಈ ಬಾರಿ ವೀಕ್ಷಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. 30 ಕೋಟಿ ವೀಕ್ಷಕರು ಹಾಟ್​ಸ್ಟಾರ್​​ನಲ್ಲಿ ಭಾರತದ ಜನಪ್ರಿಯ ಕ್ರಿಕೆಟ್​ ಲೀಗ್​​​​ ವೀಕ್ಷಣೆ ಮಾಡಿದ್ದಾರೆ. ಇದು ಕಳೆದ ವರ್ಷಕ್ಕಿಂತ ದುಪ್ಪಟ್ಟು ಎಂದು ಅಂಕಿ-ಅಂಶ ಹೇಳಿದೆ.

ನೆಟ್​ಫ್ಲಿಕ್ಸ್​, ಅಮೇಜಾನ್​ ಪ್ರೈಮ್​​ ವಿಡಿಯೋ, ಯುಟ್ಯೂಬ್​​ ಪ್ರೀಮಿಯಂ, ಸೋನಿ ಲೈವ್​​​, ಝೀ 5, ವೂಟ್​​​​​ಗಳಂತಹ ಸ್ಟ್ರೀಮಿಂಗ್​ ಆ್ಯಪ್​ಗಳಿಂದ ಹಾಟ್​​ಸ್ಟಾರ್​​ ತೀವ್ರ ಪೈಪೋಟಿ ಎದುರಿಸುತ್ತಿದೆ. ಐಪಿಎಲ್​​ನಿಂದ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದ್ದು ಕೊಂಚ ನೆಮ್ಮದಿ ನೀಡಿದೆ. ಇದೇ ತಿಂಗಳಾಂತ್ಯದಿಂದ ಆರಂಭವಾಗುವ ಐಸಿಸಿ ವಿಶ್ವಕಪ್​ ಸಹ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದು.

Last Updated : May 14, 2019, 2:40 PM IST

ABOUT THE AUTHOR

...view details