ಗಂಗಾವತಿ: ಕನಕಗಿರಿ ತಾಲೂಕಿನ ಸಿರವಾರ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಸುಮಾರು 97 ಕೋಟಿ ಮೊತ್ತದ ತೋಟಗಾರಿಕಾ ಟೆಕ್ನಾಲಜಿ ಪಾರ್ಕ್ಗೆ ಸಂಬಂಧಿಸಿದಂತೆ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ತೋಟಗಾರಿಕಾ ಸಚಿವ ಆರ್. ಶಂಕರ್ ಜೊತೆ ಚರ್ಚೆ ನಡೆಸಿದ್ದಾರೆ.
ಕನಕಗಿರಿಯಲ್ಲಿ 200 ಎಕರೆ ಜಾಗದಲ್ಲಿ ತೋಟಗಾರಿಕೆ ಪಾರ್ಕ್, ಚರ್ಚೆ - Minister of Horticulture R. Shankar
ಕನಕಗಿರಿ ತಾಲೂಕಿನ ಸಿರವಾರ ಗ್ರಾಮದ ಬಳಿ ಸುಮಾರು 97 ಕೋಟಿ ಮೊತ್ತದ ತೋಟಗಾರಿಕಾ ಟೆಕ್ನಾಲಜಿ ಪಾರ್ಕ್ ನಿರ್ಮಿಸಲು ಚರ್ಚೆ ನಡೆಸಲಾಗಿದೆ.
ಮಳೆಯಾಶ್ರಿತ ಹಾಗೂ ಎಲ್ಲ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಕನಕಗಿರಿ ಕ್ಷೇತ್ರದಲ್ಲಿ ತೋಟಗಾರಿಕಾ ಟೆಕ್ನಾಲಜಿ ಪಾರ್ಕ್ ನಿರ್ಮಾಣ ಮಾಡುವುದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತವೆ. ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣವಾಗುತ್ತಿರುವುದರಿಂದ ಪಾರ್ಕ್ಗೆ ನೀರಿನ ಸಮಸ್ಯೆಯೂ ಉದ್ಭವಿಸದು. ಈಗಾಗಲೇ ಪಾರ್ಕ್ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಜಮೀನು ಸರ್ಕಾರದ್ದೇ ಇದೆ. ಹೀಗಾಗಿ ಸರ್ಕಾರಕ್ಕೆ ಆರ್ಥಿಕವಾಗಿ ಹೆಚ್ಚಿನ ಹೊರೆಯಾಗದು ಎಂದು ಶಾಸಕರು ವಿವರಣೆ ನೀಡಿದ್ದಾರೆ.
ಇದಕ್ಕೆ ಸಚಿವ ಶಂಕರ್ ಸ್ಪಂದಿಸಿದ್ದು, ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಸಭೆಯಲ್ಲಿ ತೀರ್ಮಾನ ಕೈಗೊಂಡು ಕನಕಗಿರಿಯಲ್ಲಿ ಪಾರ್ಕ್ ಅನುಷ್ಠಾನಕ್ಕೆ ಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ಬಸವರಾಜ ತಿಳಿಸಿದ್ದಾರೆ.