ಹಾಂಕಾಂಗ್:ಟಿಯಾನ್ಮೆನ್ ಸ್ಕ್ವೇರ್ ದುರಂತಕ್ಕೆ 32 ವರ್ಷ ತುಂಬಿದ್ದು ಈ ಘಟನೆಯನ್ನು ನೆನಪಿಸಿ ಜನರು ಮೊಂಬತ್ತಿ ಬೆಳಗಿ ಜಾಗರಣೆ ಕುಳಿತಿದ್ದರು. ಈ ವೇಳೆ ಪೊಲೀಸರು ಕಾರ್ಯಕರ್ತೆ ಚೌ ಹ್ಯಾಂಗ್ ತುಂಗ್ ಅವರನ್ನು ಬಂಧಿಸಿದ್ದಾರೆ.
ಪ್ರಜಾಪ್ರಭುತ್ವದ ಬಗ್ಗೆ ಧ್ವನಿ ಎತ್ತದಂತೆ ಅಲ್ಲಿನ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಚೌ ಹ್ಯಾಂಗ್ ತುಂಗ್, ಸಭೆಯನ್ನು ನಡೆಸಿದಕ್ಕೆ ಆಕೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.