ಕರ್ನಾಟಕ

karnataka

ETV Bharat / briefs

ಹೋಂ ಕ್ವಾರಂಟೈನ್‌ನಲ್ಲಿ ಇರುವವರು 'ಕ್ವಾರಂಟೈನ್ ವಾಚ್ ಆಪ್' ಬಳಸಿ ಮಾಹಿತಿ ನೀಡಿ: ಡಿಸಿ ಡಾ. ಬಗಾದಿ ಗೌತಮ್ - Chikkamagalore district news

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬಂದ ಗರ್ಭಿಣಿಯರನ್ನು , 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು , 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಮತ್ತು ಬೇರೆ ರೋಗದಿಂದ ಬಳಲುತ್ತಿರುವವರನ್ನು ಹೋಂ ಕ್ವಾರಂಟೈನ್‌ ಮಾಡಲಾಗುತ್ತಿದೆ.

Home quarantines can use home quarantine watch app
Home quarantines can use home quarantine watch app

By

Published : Jun 23, 2020, 4:41 PM IST

ಚಿಕ್ಕಮಗಳೂರು : ಸೋಂಕಿತ ರೋಗಿಯ ಎರಡನೇ ಸಂಪರ್ಕಿತರನ್ನು ಮತ್ತು ಗರ್ಭಿಣಿಯರನ್ನು , 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಮತ್ತು ಬೇರೆ ರೋಗದಿಂದ ಬಳಲುತ್ತಿರುವವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.

ಕ್ವಾರಂಟೈನ್ ವಾಚ್ ಆಪ್ ಬಳಕೆ

ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಿಲ್ ಕಲೆಕ್ಟರ್‌ಗಳು, ಪ್ರತಿದಿನ ಹೋಮ್ ಕ್ವಾರಂಟೈನ್ ನಲ್ಲಿರುವ ಶಂಕಿತರ ಮನೆಗೆ ಬಂದು ಅವರ ಭಾವ ಚಿತ್ರವನ್ನು ತೆಗೆದು ಕ್ವಾರಂಟೈನ್ ವಾಚ್ ಆಪ್ ಮೂಲಕ ಅಪಲೋಡ್ ಮಾಡುತ್ತಿದ್ದಾರೆ. ಇದನ್ನು ಹೋಂ ಕ್ವಾರಂ ಟೈನ್‌ನಲ್ಲಿ ಇರುವವರು ಕೂಡಾ ಸ್ವತಃ ತಮ್ಮ ಮೊಬೈಲ್ ಮೂಲಕ ಆಪ್ ಲೋಡ್ ಮಾಡಬಹುದಾಗಿದೆ.

15 ಜನರ ವಿರುದ್ಧ ಎಫ್.ಐ.ಆರ್

ಜಿಲ್ಲೆಯಾದ್ಯಂತ ಜೂನ್ 19 ರವರೆಗೆ ಒಟ್ಟು 2094 ಜನರು ನಿರ್ಬಂಧಿತ ಪ್ರದೇಶವನ್ನು ಬಿಟ್ಟು ಬಂದಿರುವುದು ಕಂಡು ಬಂದಿದ್ದು, ಈ ಪ್ರಕರಣಗಳಲ್ಲಿ ಈಗಾಗಲೇ 15 ಜನರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಇನ್ನೂ ಉಳಿದವರಿಗೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರ ಸ್ವಯಂ ಪ್ರೇರಿತ ದೂರು

ಹೋಂ ಕ್ವಾರಂಟೈನ್ ಸೀಲ್ ಹೊಂದಿರುವವರು ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದು ಕಂಡು ಬಂದಲ್ಲಿ, ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ದೂರು ದಾಖಲಿಸ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರಕಟಣೆ ಹೊರಡಿಸಿದ್ದಾರೆ.

ABOUT THE AUTHOR

...view details