ನವದೆಹಲಿ: ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಚಿನ್ನ ಗೆದ್ದ ಮೊದಲು ಮಹಿಳಾ ಶೂಟರ್ ಖ್ಯಾತಿಯ ಹೀನಾ ಸಿಧು ಹಾಗೂ ಅಂಕುರ್ ಮಿತ್ತಲ್ ಹೆಸರುಗಳನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ರಾಷ್ಟ್ರೀಯ ಶೂಟಿಂಗ್ ಒಕ್ಕೂಟ ಶಿಫಾರಸು ಮಾಡಿದೆ.
ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಹೀನಾ, ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ 10 ಮೀಟರ್ ರೈಫಲ್ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ದಾಖಲೆ ಹೊಂದಿದ್ದಾರೆ. ಐಎಸ್ಎಸ್ಎಫ್ ಶೂಟಿಂಗ್ ರ್ಯಾಂಕಿಂಗ್ನಲ್ಲಿ ನಂ.1 ಶ್ರೇಯಾಂಕದಲ್ಲಿರುವ ಹೀನಾಗೆ 2014ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿದೆ.
ರೋನಕ್ ಪಂಡಿತ್ ಹಾಗೂ ಹೀನಾ ಸಿಧು ಮತ್ತೊಬ್ಬ ಶೂಟರ್ ಅಂಕುರ್ 2018ರಲ್ಲಿ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ, 2017ರಲ್ಲಿ ಬೆಳ್ಳಿ ಪದಕ ಹಾಗೂ 2018ರ ಕಾಮನ್ವೆಲ್ತ್ ಗೇಮ್ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಈ ಹಿಂದೆ ಶೂಟರ್ಗಳಾದ ಅಭಿನವ ಬಿಂದ್ರ, ಅಂಜಲಿ ಭಾಗ್ವತ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಮಂಜ್ವಿತ್ ಸಿಂಗ್ ಸಂಧು, ವಿಜಯ್ ಕುಮಾರ್, ಗಗನ್ ನಾರಂಗ್, ರೋಂಜನ್ ಸೋಧಿ ಮತ್ತು ಜೀತು ರಾಯ್ಗೆ ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿ ಲಭಿಸಿದೆ.
ಇದೇ ಸಭೆಯಲ್ಲಿ ಅರ್ಜುನ ಪ್ರಶಸ್ತಿಗೆ ಅಂಜುಮ್ ಮುದ್ಗೀಳ್, ಶಾಹಜಾರ್ ರಿಜ್ವಿ, ಓಂಪ್ರಕಾಶ್ ಮಿಠರ್ವಾಲ್ ಅವರ ಹೆಸರನ್ನೂ ಸೂಚಿಸಲಾಗಿದೆ. ಜೆಸ್ಪಾಲ್ ರಾಣಾ, ಹಾಗೂ ರೋನಕ್ ಪಂಡಿತ್ರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.