ಬೆಂಗಳೂರು:ಲಾಕ್ಡೌನ್ ನಡುವೆಯೂ ಶಿವಾಜಿನಗರದಲ್ಲಿ ಟ್ರಾಫಿಕ್ ಉಂಟಾಗಿದೆ. ಮುಖ್ಯವಾಗಿ ರಸೆಲ್ ಮಾರ್ಕೆಟ್ನಲ್ಲಿ ಜನದಟ್ಟನೆ ಕಂಡುಬಂದಿದ್ದು, ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದರು.
ಲಾಕ್ಡೌನ್ ನಡುವೆ ಶಿವಾಜಿನಗರದಲ್ಲಿ ಮಾಂಸ ಖರೀದಿಗೆ ಮುಗಿಬಿದ್ದ ಜನ - ಶಿವಾಜಿನಗರ ಟ್ರಾಫಿಕ್ ಜಾಮ್
ಭಾನುವಾರವಾದ್ದರಿಂದ ದಿನಸಿ, ತರಕಾರಿ ಹಾಗೂ ಮಾಂಸ ಖರೀದಿಗೆ ಜನರು ಆಗಮಿಸಿದ್ದು ಶಿವಾಜಿನಗರದಲ್ಲಿ ವಾಹನದಟ್ಟನೆ ಉಂಟಾಗಿದೆ.
shivaji nagar
ಇಂದು ಭಾನುವಾರವಾದ್ದರಿಂದ ದಿನಸಿ, ತರಕಾರಿ ಹಾಗೂ ಮಾಂಸ ಖರೀದಿಗೆ ಜನರು ಆಗಮಿಸಿದ್ದರು. ಹೀಗಾಗಿ ಸಣ್ಣ ಪುಟ್ಟ ರಸ್ತೆಗಳಲ್ಲೂ ಜನಜಂಗುಳಿ ಕಂಡುಬಂದಿತ್ತು.
ಲಾಕ್ಡೌನ್ ನಡುವೆಯೂ ಜನರು ಕ್ಯಾರೇ ಎನ್ನದೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಸಾಮಾಜಿಕ ಅಂತರ ಮಾಯವಾಗಿದ್ದು, ಮಾಸ್ಕ್ ಹಾಕದೆ ಜನರು ವಹಿವಾಟು ನಡೆಸುತ್ತಿದ್ದ ದೃಶ್ಯ ಕಂಡುಬಂತು.