ಮುದ್ದೇಬಿಹಾಳ(ವಿಜಯಪುರ):ಭಾರಿ ಬಿರುಗಾಳಿ ಹಾಗೂ ಮಳೆಗೆ 30 ವರ್ಷಗಳಷ್ಟು ಪುರಾತನ ಮರವೊಂದು ಮನೆಯೊಂದರ ಮೇಲೆ ಉರುಳಿಬಿದ್ದ ಘಟನೆ ತಾಲೂಕಿನ ಹಡಗಲಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಗ್ರಾಮದಲ್ಲಿರುವ ಸಂಗಪ್ಪ ಚಲವಾದಿ ಎಂಬುವವರ ಮನೆ ಮುಂದಿದ್ದ ಕಟ್ಟೆ ಮೇಲೆ ಇದ್ದ ಮರ ಬಿರುಗಾಳಿಗೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಮನೆಯೊಳಗೆ ಇರುವವರಿಗೆ ಯಾವುದೇ ಅಪಾಯ ಆಗಿಲ್ಲ. ಆದರೆ ಮನೆಯ ಛಾವಣಿ ಗೋಡೆಗೆ ಹಾನಿಯಾಗಿದ್ದು ಪತ್ರಾಸಗೆ ಧಕ್ಕೆಯಾಗಿದೆ.