ಬಿಸಿಲನಾಡಲ್ಲಿ ವಾಡಿಕೆಗಿಂತ ಅಧಿಕ ಮಳೆ... ರಾಯಚೂರು ಜನರು ಖುಷ್ - ರಾಯಚೂರು ಮಳೆ ಸುದ್ದಿ
ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ವರುಣ ತನ್ನ ಆರ್ಭಟ ಮುಂದುವರೆಸಿದ್ದು, ಒಂದು ವಾರದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.
![ಬಿಸಿಲನಾಡಲ್ಲಿ ವಾಡಿಕೆಗಿಂತ ಅಧಿಕ ಮಳೆ... ರಾಯಚೂರು ಜನರು ಖುಷ್ Heavy rain in raichuru district](https://etvbharatimages.akamaized.net/etvbharat/prod-images/768-512-03:32-kn-rcr-02-rain-script-7202440-11062020152749-1106f-01538-449.jpg)
Heavy rain in raichuru district
ರಾಯಚೂರು:ಜಿಲ್ಲೆಯಲ್ಲಿ ನಿನ್ನೆ 13 ಎಂ.ಎಂ. ಮಳೆ ಸುರಿದಿದೆ. ವಾಡಿಕೆಯಂತೆ 3 ಎಂ.ಎಂ ಮಳೆ ಸುರಿಯಬೇಕಾಗಿತ್ತು. ಆದ್ರೆ ವಾಡಿಕೆಗಿಂತ ಅಧಿಕವಾಗಿ ಮಳೆಯಾಗಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲೆಯ ಪ್ರಸಕ್ತ ಸಾಲಿನ ಮುಂಗಾರು ಮಳೆ ಜೂ.1 ರಿಂದ 11ರವರೆಗೆ ವಾಡಿಕೆಯಿಂತೆ 93 ಎಂ.ಎಂ. ಮಳೆಯಾಗಬೇಕಿತ್ತು. ಆದ್ರೆ 118 ಎಂ.ಎಂ. ಮಳೆ ಸುರಿದಿದೆ. ಇದರಿಂದ ಜಿಲ್ಲೆಯ ರೈತರು ಮುಂಗಾರು ಆಶಾದಾಯಕವಾಗಿರಲಿದೆ ಎಂದು ಸಂತಸಗೊಂಡಿದ್ದಾರೆ.
ಸದ್ಯ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಹವಾಮಾನ ಇಲಾಖೆ ವರದಿಯಂತೆ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ.