ಕರ್ನಾಟಕ

karnataka

ETV Bharat / briefs

ಕೋವಿಡ್‌ ಪರಿಸ್ಥಿತಿ ಕುರಿತು ಜೆಡಿಎಸ್‌ ಶಾಸಕರೊಂದಿಗೆ ಹೆಚ್​​ಡಿಕೆ ಆನ್‌ಲೈನ್‌ ಸಭೆ - ಹೆಚ್​ ಡಿ ಕುಮಾರಸ್ವಾಮಿ

ಬೀದರ್‌, ಕಲಬುರಗಿ, ರಾಯಚೂರು ಜಿಲ್ಲೆ ವ್ಯಾಪ್ತಿಯ ಶಾಸಕರು, ಪರಿಷತ್‌ ಸದಸ್ಯರ ಜೊತೆ ಕೋವಿಡ್‌ ಸ್ಥಿತಿಗತಿಯ ಕುರಿತು ಮಾಹಿತಿ ಪಡೆಯಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆನ್​ಲೈನ್​ ಸಭೆ ನಡೆಸಿದ್ದಾರೆ.

HDK meeting
HDK meeting

By

Published : May 20, 2021, 2:52 PM IST

ಬೆಂಗಳೂರು: ರಾಜ್ಯದ ಕೋವಿಡ್‌ ಸ್ಥಿತಿಗತಿಯ ಕುರಿತು ಮಾಹಿತಿ ಪಡೆಯಲು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದೂ ಸಹ ಆನ್‌ಲೈನ್‌ ಸಭೆ ನಡೆಸಿದರು.

ಈ ಸಭೆಯಲ್ಲಿ ಬೀದರ್‌, ಕಲಬುರಗಿ, ರಾಯಚೂರು ಜಿಲ್ಲೆ ವ್ಯಾಪ್ತಿಯ ಶಾಸಕರು, ಪರಿಷತ್‌ ಸದಸ್ಯರು, ಸ್ಥಳೀಯ ನಾಯಕರು ಭಾಗಿಯಾಗಿದ್ದರು.

ಚಿಕಿತ್ಸೆ, ಔಷಧ, ಲಸಿಕೆ ಅಭಿಯಾನ, ಆಹಾರ ಪೂರೈಕೆ ಕುರಿತು ಪಕ್ಷದ ನಾಯಕರಿಂದ ಮಾಜಿ ಸಿಎಂ ಕುಮಾರಸ್ವಾಮಿ ಮಾಹಿತಿ ಪಡೆದರು.

ABOUT THE AUTHOR

...view details