ರಾಮನಗರ:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 67ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಬಿಡದಿಯಲ್ಲಿ ಪರಿಸರ ಜಾಗೃತಿ ಮೂಲಕ ಆಚರಿಸಲಾಯಿತು.
ಹೆಚ್ಡಿಕೆ ಕೃಷಿ ತೋಟದಲ್ಲಿ ಹೆಚ್ಡಿಡಿ ವಿವಾಹ ವಾರ್ಷಿಕೋತ್ಸವ ಆಚರಣೆ - KD Devegowda latest News
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕೃಷಿ ಭೂಮಿಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಆಗಮಿಸಿ ತಮ್ಮ 67ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಹೆಚ್ಡಿಕೆ ಕೃಷಿ ತೋಟದಲ್ಲಿ ಹೆಚ್ಡಿಡಿ
ರಾಮನಗರದ ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿರವರ ಅತೀವ ಪ್ರೀತಿ ಕೃಷಿ ಭೂಮಿಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಆಗಮಿಸಿದ್ದರು.
ಹಸಿರಿನಿಂದ ಕಂಗೊಳಿಸುತ್ತಾ ಸಂಭ್ರಮಿಸುತ್ತಿರುವ ತೋಟವನ್ನು ಕಂಡು ದೇವೇಗೌಡರು ಅಷ್ಟೇ ಸಂಭ್ರಮ ಪಟ್ಟರು. ಇಷ್ಟೇ ಅಲ್ಲದೇ ದೇವೇಗೌಡರು, ತಾಯಿ ಚೆನ್ನಮ್ಮರಿಗೆ ಇಂದು 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನ ಈ ತೋಟದಲ್ಲೇ ಆಚರಿಸಿಕೊಂಡು ನಂತರ ಕಲ್ಪವೃಕ್ಷವಾದ ತೆಂಗಿನ ಸಸಿ ನೆಟ್ಟರು.
Last Updated : May 24, 2021, 9:02 PM IST