ಹಾಸನ:ಸರಿಯಾದ ಸಮಯಕ್ಕೆ ಮಳೆ ಬಾರದೆ, ಜಿಲ್ಲೆಯ ಜೀವನದಿಯ ಒಡಲು ಬರಿದಾಗಿದೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ವರುಣ ಕೈ ಕೊಟ್ಟಿದ್ರಿಂದ ಜಿಲ್ಲೆಯ ಜನ ಚಿಂತೆಗೀಡಾಗಿದ್ದಾರೆ.
ಜಲಾಶಯದ ಕುರಿತು ಮಾಹಿತಿ :
- ಜಲಾಶಯದ ಒಟ್ಟು ನೀರಿನ ಮಟ್ಟ 37.103 ಟಿಎಂಸಿ
- ಇಂದು ಶೇಖರಣೆಯಾಗಿರುವ ನೀರಿನ ಸಂಗ್ರಹ 12.21 ಟಿಎಂಸಿ
- ಜಲಾಶಯ ನಂಬಿರುವ ರೈತರಿಗೆ ವಾರ್ಷಿಕವಾಗಿ ಬೇಕಾಗಿರುವ ನೀರಿನ ಪ್ರಮಾಣ 58 ಟಿಎಂಸಿ
- ಜೂನ್ 1 ರಿಂದ ಇಲ್ಲಿಯ ತನಕ 7.5 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ
- ನದಿ ಮೂಲಕ ಪ್ರತಿನಿತ್ಯ 200ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ
ಜಲಾಶಯದ ನೀರು ಉಪಯೋಗದ ವಿವರ :
- ಕಾಲುವೆಗಳ ಮೂಲಕ ನೀರಾವರಿಗೆ 43.67 ಟಿಎಂಸಿ ನೀರು ಬೇಕಾಗುತ್ತೆ
- ಮೈಸೂರು ಮಹಾರಾಜರು ಕಟ್ಟಿಸಿದ್ದ ಶ್ರೀ ರಾಮ ದೇವರ ಅಣೆಕಟ್ಟೆಗೆ 5 ಟಿಎಂಸಿ ನೀರು
- ಮಂದಗೆರೆ ಅಣೆಕಟ್ಟೆಗೆ 3.13 ಟಿಎಂಸಿ ನೀರು
- ಏತ ನೀರಾವರಿ ಯೋಜನೆಗಳಾದ ಅಡಿಕೆಬೊಮ್ಮನಹಳ್ಳಿ, ಕಾಮಸಮುದ್ರ, ಹುಚ್ಚನಕೊಪ್ಪಲು, ಹಳ್ಳಿಮೈಸೂರು, ಕಾಚೇನಹಳ್ಳಿ, ಬಾಗೂರು-ನವಿಲೆಗೆ 3 ಟಿಎಂಸಿ ನೀರು
ಬರಿದಾದ ಹಾಸನ ಜಿಲ್ಲೆಯ ಜೀವನದಿಯ ಒಡಲು..
ಸಕಾಲಕ್ಕೆ ನಾಲೆಗಳಲ್ಲಿ ನೀರು ಬಾರದೆ, ಬೆಳೆ ಬೆಳಲಾಗದೆ ಕಷ್ಟ ಎದುರಿಸುತ್ತಿದ್ದಾರೆ ಇಲ್ಲಿನ ರೈತರು. ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಸಕಾಲಕ್ಕೆ ಮಳೆಯಾದ್ರೆ ಮಾತ್ರ ಜಲಾಶಯ ಭರ್ತಿಯಾಗಲು ಸಾಧ್ಯ. ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ, ಅಷ್ಟೆಯಲ್ಲದೇ ಮಲೆನಾಡ ಪ್ರದೇಶವಾದ ಸಕಲೇಶಪುರದಲ್ಲಿಯೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಕುಡಿಯುವ ನೀರಿಗಾಗಿ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಸದ್ಯ ವರುಣನ ಕೃಪೆಯಿಂದ ಕುಡಿಯುವ ನೀರಿಗೆ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.