ಹೈದರಾಬಾದ್:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ಗೆ ನಿನ್ನೆ ಅದ್ಧೂರಿ ತೆರೆ ಬಿದ್ದಿದೆ. ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಿವಿಧ ತಂಡದ ಪ್ಲೇಯರ್ಸ್ ಕೆಲ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅದರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಟೈಲಿಶ್ ಅವಾರ್ಡ್ ಪಡೆದುಕೊಂಡಿದ್ದಾರೆ.
ನಿನ್ನೆ ಪಂದ್ಯ ಮುಗಿದ ಬಳಿಕ ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಸ್ಟೈಲಿಶ್ ಅವಾರ್ಡ್ ಪಂಜಾಬ್ ತಂಡದ ಪ್ಲೇಯರ್ ಕೆಎಲ್ ರಾಹುಲ್ ಪಾಲಾಯಿತು. ಆದ್ರೆ ಈ ತಂಡ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಕಾರಣ, ಪ್ರಶಸ್ತಿಯನ್ನ ಹಾರ್ದಿಕ್ ಪಾಂಡ್ಯ ಕಲೆಕ್ಟ್ ಮಾಡಿಕೊಂಡಿದ್ದರು. ಇದೇ ವಿಚಾರವನ್ನಟ್ಟಿಕೊಂಡು ನೆಟಿಜನ್ಸ್ ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯಾ ಕಾಲೆಳೆಯುವ ಕೆಲಸ ಮಾಡಿದ್ದಾರೆ.