ಕರ್ನಾಟಕ

karnataka

ETV Bharat / briefs

ಹರ್ಭಜನ್​​ ಸಿಂಗ್​ 150... ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ 3ನೇ ಭಾರತೀಯ - ಶಿಖರ್​ ಧವನ್​(18)

ಡೆಲ್ಲಿ ಕ್ಯಾಪಿಟಲ್ಸ್​​ ಶೆರ್ಫಾನ್​ ರುದರ್​ಫೋರ್ಡ್​ ವಿಕೆಟ್​ ಪಡೆಯುವ ಮೂಲಕ ಐಪಿಎಲ್​ ಇತಿಹಾಸದಲ್ಲಿ 150 ವಿಕೆಟ್​ ಪಡೆದ 4 ಬೌಲರ್​ ಎಂಬ ಖ್ಯಾತಿಗೆ ಪಾತ್ರರಾದರು.  ಈ ಪಂದ್ಯಕ್ಕೂ ಮುನ್ನ 148 ವಿಕೆಟ್​ ಪಡೆದಿದ್ದ ಹರಭಜನ್​ ಶಿಖರ್​ ಧವನ್​(18) ಹಾಗೂ ಶೆರ್ಫಾನ್​ ರುದರ್​ಪೋರ್ಡ್​ ವಿಕೆಟ್​ ಪಡೆದು ತಮ್ಮ  159 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

Harbhajan

By

Published : May 11, 2019, 11:37 AM IST

Updated : May 11, 2019, 11:39 PM IST

ವಿಶಾಖ ಪಟ್ಟಣ:ಡೆಲ್ಲಿ ಕ್ಯಾಪಿಟಲ್ಸ್​​​ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ನ ಹರ್ಭಜನ್​ಸಿಂಗ್​ ಐಪಿಎಲ್​ ಇತಿಹಾಸದಲ್ಲಿ 150 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​​ನ ಶೆರ್ಫಾನ್​ ರುದರ್​ಫೋರ್ಡ್​ ವಿಕೆಟ್​ ಪಡೆಯುವ ಮೂಲಕ ಐಪಿಎಲ್​ ಇತಿಹಾಸದಲ್ಲಿ 150 ವಿಕೆಟ್​ ಪಡೆದ 4 ಬೌಲರ್​ ಎಂಬ ಖ್ಯಾತಿಗೆ ಪಾತ್ರರಾದರು.
ಈ ಪಂದ್ಯಕ್ಕೂ ಮುನ್ನ 148 ವಿಕೆಟ್​ ಪಡೆದಿದ್ದ ಹರ್ಭಜನ್​ ಶಿಖರ್​ ಧವನ್​(18) ಹಾಗೂ ಶೆರ್ಫಾನ್​ ರುದರ್​ಪೋರ್ಡ್​ ವಿಕೆಟ್​ ಪಡೆದು ತಮ್ಮ 159 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಹರಭಜನ್​ ಸಿಂಗ್​ಗೂ ಮೊದಲು ಮುಂಬೈ ಇಂಡಿಯನ್ಸ್​ ಲಸಿತ್​ ಮಲಿಂಗಾ 169(121 ಪಂದ್ಯ), ಡೆಲ್ಲಿ ಕ್ಯಾಪಿಟಲ್ಸ್​​ ಅಮಿತ್​ ಮಿಶ್ರಾ 157(147), ಕೆಕೆಆರ್​ನ ಪಿಯೂಷ್​​ ಚಾವ್ಲಾ 150(157) ವಿಕೆಟ್​ ಪಡೆದಿದ್ದಾರೆ.

ಹರ್ಭಜನ್​ ಸಿಂಗ್​ ಈ ಟೂರ್ನಿಯಲ್ಲಿ 10 ಪಂದ್ಯಗಳಿಂದ 16 ವಿಕೆಟ್​ ಪಡೆದು ಚೆನ್ನೈ ಸೂಪರ್​ಕಿಂಗ್ಸ್​ ಪರ ಹೆಚ್ಚು ವಿಕೆಟ್​ ಪಡೆದ 3 ನೇ ಬೌಲರ್​ ಎನಿಸಿದರು. ಸಿಎಸ್​ಕೆ ತಂಡದ ಇಮ್ರಾನ್​ ತಾಹೀರ್​ 24 ವಿಕೆಟ್​ ಪಡೆಯುವ ಮೂಲಕ ಹೆಚ್ಚು ವಿಕೆಟ್​ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನಪಡೆದಿದ್ದಾರೆ. ದೀಪಕ್​ ಚಹಾರ್​ 19 ವಿಕೆಟ್​ ಪಡೆದು 3 ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಕಗಿಸೋ ರಬಾಡಾ 25 ವಿಕೆಟ್​ ಪಡೆದು ಪರ್ಪಲ್​ ಕ್ಯಾಪ್​ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ

Last Updated : May 11, 2019, 11:39 PM IST

ABOUT THE AUTHOR

...view details