ಮೈಸೂರು:ಸರ್ಕಾರದ ಆಡಳಿತದಲ್ಲಿ ಭದ್ರತೆ ಇಲ್ಲ. ಸದ್ಯಕ್ಕೆ ಅಯೋಗ್ಯ ಪರಿಸ್ಥಿತಿ ಬಂದಿದೆ ಎಂದು ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಹುಣಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹತ್ತು ರೂಪಾಯಿ ಬಿಡುಗಡೆ ಆಗಬೇಕು ಅಂದ್ರೂ ಯಡಿಯೂರಪ್ಪ ಹತ್ರ ಹೋಗ್ಬೇಕು. ಆದ್ರೆ ಯಡಿಯೂರಪ್ಪ ಹಣ ಬಿಡುಗಡೆ ಮಾಡ್ತಿಲ್ಲ ಎಂದು ಕಿಡಿಕಾರಿದರು.
ಆರೋಗ್ಯ ಸಚಿವರು ಸುಮಾರು 2,500 ವೈದರ ನೇಮಕಕ್ಕೆ ಘೋಷಣೆ ಮಾಡಿ ಸುಮಾರು ಒಂದು ತಿಂಗಳು ಆಯ್ತು. ಪ್ರತಿಯೊಂದಕ್ಕೂ ಫೈನಾನ್ಸ್ ಕ್ಲಿಯರೆನ್ಸ್ ಬೇಕು, ಸಿಎಂ ಯಡಿಯೂರಪ್ಪ ಫೈನಾನ್ಸ್ ಮಿನಿಸ್ಟರ್ ಇರೋದರಿಂದ ಎಲ್ಲಾ ಅವರ ಹತ್ತಿರ ಹೋಗಬೇಕು. ಅವರು ಕ್ಲಿಯರ್ ಮಾಡಲ್ಲ. ಆರೋಗ್ಯ ಮಂತ್ರಿಗೆ ಕೋವಿಡ್ ಕೆಲಸ ಮಾಡಲು ಆಸಕ್ತಿ, ಅವಸರ ಇದೆ. ತನ್ನ ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಲು ದುಡ್ಡು ಬೇಡವೇ ಎಂದು ಪ್ರಶ್ನಿಸಿದರು.
10 ರೂಪಾಯಿ ಕೆಲಸ ಇದ್ರು ಕೂಡ ಸಿಎಂ ರಿಲೀಸ್ ಮಾಡಬೇಕು. ಭತ್ತ, ರಾಗಿ, ಜೋಳ ಕೊಟ್ಟಿರುವ ರೈತರಿಗೆ ಸರ್ಕಾರದ ದುಡ್ಡು ಇನ್ನೂ ಬಿಡುಗಡೆಯಾಗಿಲ್ಲ. ಆದರೆ ವಾರಕ್ಕೆ ಒಂದು ಸಲ ಕಾಂಟ್ರಾಕ್ಟರ್ ಬಿಲ್ಸ್ ರಿಲೀಸ್ ಆಗುತ್ತೆ. ರೈತರ ಹತ್ತಿರ ಯಾವ ಕಿಕ್ ಬ್ಯಾಕ್ ಬರುತ್ತೆ? ಕಾಂಟ್ರಾಕ್ಟರ್ನಿಂದ 20 ಪರ್ಸೆಂಟ್ ಬರುತ್ತೆ. ಆಡಳಿತದಲ್ಲಿ ಭದ್ರತೆ ಇಲ್ಲದ್ದಕ್ಕೆ ಹೋಲ್ ಸೇಲ್ ವೈಫಲ್ಯತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.