ಹಾಸನ: ಈ ದೇಶದಲ್ಲಿ ಏನಾದ್ರೂ ಸಾವು ಸಂಭವಿಸುತ್ತಿದೆ ಎಂದರೆ ಅದು ಕೋವಿಡ್ ಸಾವಲ್ಲ, ಸರ್ಕಾರ ಮಾಡುತ್ತಿರುವ ಕೊಲೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ದೇಶದಲ್ಲಿ ಜನ ಸಾಯುತ್ತಿರುವುದು ಕೋವಿಡ್ನಿಂದಲ್ಲ, ಸರ್ಕಾರದಿಂದ; ಹೆಚ್.ಡಿ. ರೇವಣ್ಣ - ಶಿಲ್ಪ ನಾಗ್
ಮೈಸೂರಿನ ಶಿಲ್ಪ ನಾಗ್ ಉತ್ತಮ ಕೆಲಸ ಮಾಡಿದ್ದಾರೆ. ಇದನ್ನು ಸರ್ಕಾರ ಮತ್ತು ಕೆಲವು ಜನಪ್ರತಿನಿಧಿಗಳೇ ಒಪ್ಪಿಕೊಂಡಿದ್ದಾರೆ. ಆದರೆ ಒಬ್ಬ ಕೇಂದ್ರ ಸರ್ಕಾರದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವ ಆಕೆ ರಾಜೀನಾಮೆ ಕೊಡಲು ಮುಂದಾಗುತ್ತಾರೆ ಎಂದರೆ ಈ ಸರ್ಕಾರದ ಆಡಳಿತ ಹೇಗಿದೆ ಎಂಬುದನ್ನು ನೀವೇ ಯೋಚಿಸಿ ಎಂದು ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಆಮ್ಲಜನಕದ ಕೊರತೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಸಾಯುತ್ತಿದ್ದಾರೆ. ಅಧಿಕಾರಿಗಳು ಇದನ್ನು ಬಹಿರಂಗಪಡಿಸಿದರೆ ಅವರನ್ನು ಸರ್ಕಾರ ವರ್ಗಾವಣೆ ಮಾಡುತ್ತದೆ. ಹಾಗಾಗಿ ಸಾವಿನ ಸಂಖ್ಯೆಯನ್ನು ಅಧಿಕಾರಿಗಳೇ ಮುಚ್ಚಿಡುತ್ತಿದ್ದಾರೆ. ಆಮ್ಲಜನಕ ಕೊರತೆಯಿಂದ ಸಾಯುತ್ತಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ನೀವು ಮುಖ್ಯಮಂತ್ರಿಯನ್ನು ಕಳುಹಿಸುವುದಾದರೆ ನಾನು ದಾಖಲಾತಿ ಕೊಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
ಮೈಸೂರಿನ ಶಿಲ್ಪ ನಾಗ್ ಉತ್ತಮ ಕೆಲಸ ಮಾಡಿದ್ದಾರೆ. ಇದನ್ನು ಸರ್ಕಾರ ಮತ್ತು ಕೆಲವು ಜನಪ್ರತಿನಿಧಿಗಳೇ ಒಪ್ಪಿಕೊಂಡಿದ್ದಾರೆ. ಆದರೆ ಒಬ್ಬ ಕೇಂದ್ರ ಸರ್ಕಾರದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವ ಆಕೆ ರಾಜೀನಾಮೆ ಕೊಡಲು ಮುಂದಾಗುತ್ತಾರೆ ಎಂದರೆ ಈ ಸರ್ಕಾರದ ಆಡಳಿತ ಹೇಗಿದೆ ಎಂಬುದನ್ನು ನೀವೇ ಯೋಚಿಸಿ. ಶಿಲ್ಪ ನಾಗ್ ಪ್ರಾಮಾಣಿಕ ಅಧಿಕಾರಿ ಈ ಸರ್ಕಾರ ತಪ್ಪು ಮಾಡಿದವರಿಗೆ ವರ್ಗಾವಣೆ ಮಾಡುವುದು ಸರಿ. ಆದ್ರೆ ತಪ್ಪು ಮಾಡದವರಿಗೂ ವರ್ಗಾವಣೆ ಶಿಕ್ಷೆ ಎಂದರೆ ಹೇಗೆ. . ? ಡಿಸಿ ಎಂದರೆ ಯಾರು. . ? ಅವರೇನು ರೇವಣ್ಣನ ಕಡೆಯವರಾ. . ? ಸಂಬಳ ಕೊಡೋದು ಸರ್ಕಾರವಲ್ಲವೇ. . ? ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರು ನಗರ ಪಾಲಿಕೆಯ ಆಯುಕ್ತರು ಪ್ರಾಮಾಣಿಕ ಮಹಿಳಾ ಅಧಿಕಾರಿ ಎನ್ನುವಾಗ ನಾನು ಅವರಿಗೆ ಮತ್ತೊಂದು ಸರ್ಟಿಫಿಕೇಟ್ ಕೊಡಲು ಸಾಧ್ಯನಾ. . ? ಎಂದು ಪ್ರಶ್ನಿಸಿದರು.