ಮೆಕ್ಸಿಕೋ:ಮಿನಟಿಟ್ಲನ್ ನಗರದ ಬಾರ್ ಒಂದರಲ್ಲಿ ಅನಾಮಧೇಯ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ತಡರಾತ್ರಿ ಬಾರ್ಗೆ ನುಗ್ಗಿದ ವ್ಯಕ್ತಿ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಒಂದು ಮಗು, ಏಳು ಪುರುಷರು, ಐದು ಮಂದಿ ಮಹಿಳೆಯರು ಸೇರಿದಂತೆ ಒಟ್ಟು 13 ಮಂದಿ ಪ್ರಾಣ ತೆತ್ತಿದ್ದಾರೆ.