ಕಾರ್ಡಿಫ್: ವಿಶ್ವಕಪ್ ಕ್ರಿಕೆಟ್ ಅಭಿಯಾನದಲ್ಲಿ ತಮ್ಮ ಮೊದಲ ಪಂದ್ಯಗಳಲ್ಲಿ ಸೋಲನುಭವಿಸಿರುವ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಇಂದು ಚೊಚ್ಚಲ ಗೆಲುವಿಗಾಗಿ ಫೈಟ್ ಮಾಡಲಿವೆ.
ಎರಡನೇ ವಿಶ್ವಕಪ್ನಲ್ಲಿ ಆಡುತ್ತಿರುವ ಅಫ್ಘಾನಿಸ್ತಾನ ತಂಡ 1996ರ ವಿಶ್ವ ಚಾಂಪಿಯನ್ ವಿರುದ್ಧ ಕಣಕ್ಕಿಳಿಯುತ್ತಿದೆ. ವಿಶ್ವಕಪ್ಗೆ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿ ವಿಂಡೀಸ್ನಂತಹ ದೊಡ್ಡ ತಂಡವನ್ನು ಮಣಿಸಿ ಟೂರ್ನಿಯಲ್ಲಿ 9ನೇ ತಂಡವಾಗಿ ಭಾಗವಹಿಸಿರುವ ಅಫ್ಘನ್ ಆಟಗಾರರು, ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರೂ ಕೆಚ್ಚೆದೆಯ ಹೋರಾಟ ನಡೆಸಿದ್ದರು.
ಕೇವಲ 75 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಅಫ್ಘನ್ಗೆ, ರಹ್ಮತ್ ಶಾ ನಜೀಬುಲ್ಲಾ ಜಾಡ್ರನ್, ನೈಬ್ ಹಾಗೂ ರಶೀದ್ ಖಾನ್ ಆಸೀಸ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ ತಂಡದ ಮೊತ್ತವನ್ನು 200 ರನ್ಗಳ ಗಟಿ ದಾಟಿಸಿದ್ದರು. ಇದೀಗ ರಶೀದ್,ನಬಿ, ಮುಜೀಬ್ರ ಸ್ಪಿನ್ ಬಲ, ಶಹ್ಜಾದ್ ಉತ್ತಮ ಬ್ಯಾಟಿಂಗ್ ಲಯ, ರಹ್ಮತ್ ಶಾ, ಜಾಡ್ರನ್ನಂತಹ ಸ್ಫೋಟಕ ಆಟಗಾರರಿಂದ ಕೂಡಿರುವ ಬ್ಯಾಟಿಂಗ್ ಲೈನ್ಅಪ್ನೊಂದಿಗೆ ಲಂಕಾ ವಿರುದ್ಧ ಗೆಲುವು ಸಾಧಿಸಲು ಸಿದ್ಧವಾಗಿದೆ.
ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 29.2 ಓವರ್ಗಳಲ್ಲಿ 136 ರನ್ಗಳಿಗೆ ಆಲೌಟ್ ಆಗಿದ್ದ ಶ್ರೀಲಂಕಾ, 10 ವಿಕೆಟ್ಗಳ ಹೀನಾಯ ಸೋಲನುಭವಿಸಿತ್ತು.
ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿರುವ ಲಂಕಾಗೆ ಹಿರಿಯ ಆಟಗಾರರಾದ ತಿರುಮನ್ನೆ, ಮ್ಯಾಥ್ಯೂಸ್, ಸ್ಪೋಟಕ ಆಟಗಾರರಾದ ಕುಶಾಲ್ ಪೆರೆರಾ,ಕುಶಾಲ್ ಮೆಂಡಿಸ್ ಸಿಡಿದು ನಿಲ್ಲಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಮಲಿಂಗಾ ಜೊತೆಗೆ ಲಕ್ಮಲ್,ತಿಸ್ಸಾರ ಪೆರೆರಾರಂತಹ ಅನುಭವಿಗಳಿದ್ದು, ಈ ಪಂದ್ಯದಲ್ಲಿ ಲಂಕಾ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮುಖಾಮುಖಿ: