ಕರ್ನಾಟಕ

karnataka

ETV Bharat / briefs

ಸಿಆರ್‌ಪಿಎಫ್‌ ಸೈನಿಕರ ಗೌರವಾರ್ಥ ಸರ್ಜಿಕಲ್‌ ಸೀರೆಗಳು! - ಮಿಲ್​​​

ಪುಲ್ವಾಮ ದುರಂತದಲ್ಲಿ ಮಡಿದ ಸಿಆರ್​​ಪಿಎಫ್ ಯೋಧರಿಗೆ ಗೌರವ ಸೂಚಿಸುವ ಸಲುವಾಗಿ ಗುಜರಾತ್​​ನ ಮಿಲ್​​​ವೊಂದು ಯೋಧರ ಭಾವಚಿತ್ರಗಳನ್ನು ಸೀರೆ ಮೇಲೆ ಅಚ್ಚು ಹಾಕಿಸಿದೆ.

ಸೀರೆ ಮೇಲೆ ಸೈನಿಕರ ಭಾವಚಿತ್ರ ರಚಿಸಿ ಗೌರವ

By

Published : Feb 24, 2019, 5:42 PM IST

ಸೂರತ್‌ (ಗುಜರಾತ್​​​​) : ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿರಬಹುದು. ಆದರೆ, ಅವರು ಈಗ ದೇಶದ ವೀರಪುತ್ರರು. ಪ್ರತಿ ಭಾರತೀಯನೂ ಅವರ ತ್ಯಾಗಕ್ಕೆ ಹೆಮ್ಮೆಪಡುತ್ತಿದ್ದಾರೆ. ವೀರಸೇನಾನಿಗಳ ಸ್ಮರಣೆಗಾಗಿ ಸೀರೆಗಳ ಮೇಲೆ ಅವರ ಭಾವಚಿತ್ರಗಳನ್ನೇ ಪ್ರಿಂಟ್‌ ಮಾಡಿ ವಿಶಿಷ್ಟ ಗೌರವ ಸಲ್ಲಿಸಲಾಗಿದೆ.

ಭಾರತೀಯ ಸೇನೆ. ಕಾರ್ಯಾಚರಣೆಯಲ್ಲಿರುವ ಯೋಧರು. ಯುದ್ಧ ಟ್ಯಾಂಕರ್‌, ತೇಜಸ್‌ ಏರ್‌ಕ್ರಾಫ್ಟ್‌ ಚಿತ್ರಗಳೂ ಈ ಸ್ಯಾರಿಯಲ್ಲುಂಟು. ಅಪರೂಪ ಅನಿಸೋದಿಲ್ವೇ. ಆದರೂ ನಿಜ. ಇವು ಸ್ಯಾರಿ. ಬರೀ ಸ್ಯಾರಿ ಅಲ್ಲ ಸರ್ಜಿಕಲ್‌ ಸ್ಯಾರಿಗಳು. ಗುಜರಾತ್‌ನ ಸೂರತ್‌ ಸಿಟಿಯ ಅನ್ನಪೂರ್ಣ ಇಂಡಸ್ಟ್ರೀಸ್ ಪ್ರೈ. ಲಿಮಿಟೆಡ್‌ ಅನ್ನೋ ಟೈಕ್ಸ್‌ಟೈಲ್‌ ಮಿಲ್‌, ದೇಶದ ವೀರಪುತ್ರರಿಗೆ ವಿಶಿಷ್ಟ ಗೌರವ ಸಲ್ಲಿಸಲು ಸರ್ಜಿಕಲ್ ಸ್ಟ್ರೈಕ್‌ ಹೆಸರಿನ ಸ್ಯಾರಿಗಳನ್ನ ಪ್ರಿಂಟ್ ಮಾಡ್ತಿದೆ.

ಪುಲ್ವಾಮಾ ಉಗ್ರರ ದಾಳಿಯ ನೋವನ್ನ ಇನ್ನೂ ದೇಶ ಮರೆತಿಲ್ಲ. 44ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ರೇ, ಇನ್ನೂ ಕೆಲವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಆ ಎಲ್ಲ ಯೋಧರ ಸ್ಮರಣಾರ್ಥವಾಗಿ ಮತ್ತು ಭಾರತೀಯ ಸೇನೆಯ ಸಾಮರ್ಥ್ಯ ತೋರಿಸುವ ಉದ್ದೇಶದಿಂದಲೇ ಈ ಸೀರೆಗಳನ್ನ ರೂಪಿಸಲಾಗಿದೆ. ಆದ್ರೇ, ಈಗ ಇವು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಆಗಲೇ ದೇಶಾದ್ಯಂತ ಇವುಗಳಿಗಾಗಿ ಆರ್ಡರ್‌ ಬಂದಿವೆಯಂತೆ. ಸದ್ಯದಲ್ಲೇ ಮಾರುಕಟ್ಟೆಗೂ ಬರ್ತಿವೆಯಂತೆ.

ಸೈನಿಕರಿಗೆ ತಮ್ಮದೇ ರೀತಿಯಲ್ಲೀಗ ಗೌರವ ಸಮರ್ಪಿಸುತ್ತಿದ್ದಾರೆ. ಆದ್ರೇ, ಈ ಸೂರತ್‌ನ ಈ ಮಿಲ್‌ ಭಾರತೀಯ ಸೇನೆಗೆ, ಅದರ ಸಾಮರ್ಥ್ಯಕ್ಕೆ, ಸೈನಿಕರ ಬಲಿದಾನಕ್ಕೆ ಗೌರವ ಸಮರ್ಪಿಸುವುದಕ್ಕಾಗಿಯೇ ಸರ್ಜಿಕಲ್‌ ಸ್ಯಾರಿಗಳನ್ನ ಮಾರ್ಕೆಟ್‌ಗೆ ಹೊರತರುತ್ತಿದೆ. ಮಿಲ್‌ನ ಕ್ರಿಯೇಟಿವ್ ಸೆಕ್ಷನ್‌ನಲ್ಲಿ ಇನ್ನೂ ಕೆಲಸ ನಡೀತಿದೆ. ಇವುಗಳ ಮಾರಾಟದಿಂದ ಬಂದ ಸಂಪೂರ್ಣ ಲಾಭ ಪುಲ್ವಾಮಾ ಹುತಾತ್ಮರ ಕುಟುಂಬಗಳಿಗೇ ನೀಡಲಾಗುತ್ತಂತೆ. ಆ ಮೂಲಕ ವೀರ ಯೋಧರ ಕುಟುಂಬಗಳಿಗೆ ಅಲ್ಪ ನೆರವು ನೀಡಲಿದ್ದಾರಂತೆ ಮಿಲ್‌ ಮಾಲೀಕರು.

'ಈ ಸ್ಯಾರಿಗಳ ಮೇಲೆ ದೇಶದ ಸೇನಾ ಸಾಮರ್ಥ್ಯ ತೋರಿಸಿದ್ದೇವೆ. ಯೋಧರ ಶಕ್ತಿ, ಹೊಸ ಯುದ್ಧ ಟ್ಯಾಂಕರ್ಸ್ ಹಾಗೂ ತೇಜಸ್ ಏರ್‌ಕ್ರಾಫ್ಟ್‌ ಸೇರಿ ಸೇನೆಗೆ ಸಂಬಂಧಿಸದ ಚಿತ್ರಗಳನ್ನ ಸ್ಯಾರಿಯಲ್ಲಿ ಪ್ರಿಂಟ್‌ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ರಾಜಕಾರಣಿಗಳ ಭಾವಚಿತ್ರವನ್ನ ಸೀರೆಗಳ ಮೇಲೆ ಪ್ರಿಂಟ್ ಮಾಡಲು ಆರ್ಡರ್‌ ಬರುತ್ತವೆ. ಆದ್ರೇ, ನಾವು ಆ ರೀತಿಯ ಆರ್ಡರ್‌ ಪಡೆಯೋದಿಲ್ಲ. ದೇಶಭಕ್ತ ಸಾರೋದಕ್ಕಾಗಿ ನಾವು ಸರ್ಜಿಕಲ್‌ ಸ್ಯಾರಿ ಹೊರ ತರುತ್ತಿದ್ದೇವೆ' ಅಂತ ಮಿಲ್‌ನ ನಿರ್ದೇಶಕ ಮನೀಶ್‌ ಅಗರವಾಲ್‌ ತಿಳಿಸಿದ್ದಾರೆ.

ಭಾರತೀಯ ಸೇನೆಗೆ ವಿಶ್ವದ ಯಾವುದೇ ವೈರಿ ಬಗ್ಗುಬಡಿಯಬಲ್ಲ ಸಾಮರ್ಥ್ಯವಿದೆ. ಅದಕ್ಕೆ ಉರಿ-ದಿ ಸರ್ಜಿಕಲ್‌ ಸ್ಟ್ರೈಕ್‌ ಒಂದೊಳ್ಳೆ ಉದಾಹರಣೆ. ಅದೇ ಹೆಸರಿನ ಸ್ಯಾರಿಗಳು ಮಾರುಕಟ್ಟೆಗೆ ತರಲಾಗುತ್ತಿದೆ. ಆ ಮೂಲಕ ಸೇನೆ, ಸೈನಿಕರ ಸಾಮರ್ಥ್ಯ ತೋರಿಸುವುದಷ್ಟೇ ಅಲ್ಲ, ಅವರ ಬಲಿದಾನ ಸ್ಮರಿಸಿಕೊಳ್ಳುತ್ತಿರುವುದು ನಿಜಕ್ಕೂ ಗ್ರೇಟ್‌.

ABOUT THE AUTHOR

...view details