ನವದೆಹಲಿ:ಇವನಿಗೇನು ಹುಚ್ಚ ಅನ್ಬೇಕು ಇಲ್ಲ ಎಡಬಿಡಂಗಿ ಅಂತಾ ಕರೆಯಬೇಕೋ ಈ ವಿಡಿಯೋ ನೋಡಿದ ಮೇಲೆ ನೀವೇ ಡಿಸೈಡ್ ಮಾಡಿ. ಇತ್ತೀಚೆಗಷ್ಟೇ ಭಾರಿ ಸಂಚಲನ ಹುಟ್ಟು ಹಾಕಿರುವ ಪಬ್‌ಜೀ ಮೊಬೈಲ್ ಗೇಮ್ಗೆ ಈಗಾಗಲೇ ಯುವಕರು ಬಲಿಯಾಗುತ್ತಿದ್ದಾರೆ. ಇದರ ಮಧ್ಯೆ ಯುವಕನೋರ್ವ ತನ್ನ ಮ್ಯಾರೇಜ್ನಲ್ಲೂ ಇದೇ ಡೆಡ್ಲಿ ಗೇಮ್ ಆಡ್ತಾಯಿದ್ದ. ಪಕ್ಕದಲ್ಲಿ ಕೂತಿದ್ದ ವರನ ಈ ಮನೆಹಾಳ್ ಆಟ ನೋಡಿ ವಧುವಂತೂ ಕಸಿವಿಸಿಗೊಂಡಳು.
ಮದುವೆಯಲ್ಲೇ ವರನಿಗೆ ಪಬ್‌ಜೀ ಹುಚ್ಚು.. ಪಕ್ಕದಲ್ಲೇ ಕೂತಿದ್ದ ದಡ್ಡ ಶಿಖಾಮಣಿ ಕಂಡ ವಧು ತಬ್ಬಿಬ್ಬು! - ಗಿಫ್ಟ್
ಮದುವೆ ಸಮಾರಂಭದ ವೇಳೆ ವರನೋರ್ವ ಪಬ್‌ಜೀ ಗೇಮ್ ಆಡುವುದರಲ್ಲಿ ಬ್ಯುಸಿಯಾಗಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮದುವೆ ಸಮಾರಂಭದ ವೇಳೆ ವರ ವಧುವಿಗೆತಾಳಿಕಟ್ಟಬೇಕಿತ್ತು. ಜೀವನ ಆ ಅಪರೂಪದ ಕ್ಷಗಳನ್ನ ಯಾರೇ ಆದರೂ ಅವಿಸ್ಮರಣೀಯಗೊಳಿಸಿಕೊಳ್ತಾರೆ. ಪ್ರತಿ ಕ್ಷಣ ಸಂಭ್ರಮಿಸ್ತಾರೆ. ಆದರೆ, ಈ ಎಡಬಿಡಂಗಿ ಪಬ್‌ಜೀ ಗೇಮ್ ಆಡುವುದರಲ್ಲಿ ಫುಲ್ ಬ್ಯುಸಿ ಆಗಿದ್ದ. ಅದೇ ವಿಡಿಯೋ ಇದೀಗ ವೈರಲ್ ಆಗಿದೆ.
ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ಖಚಿತ ಮಾಹಿತಿ ಇಲ್ಲವಾದರೂ, ವಧು ಪಕ್ಕದಲ್ಲಿ ಕುಳಿತುಕೊಂಡಿರುವ ವರ ಚಿಕನ್ ಡಿನ್ನರ್ ಎಂಬ ಗೇಮ್ ಆಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಮದುವೆ ಸಮಾರಂಭಕ್ಕೆ ಆಗಮಿಸಿದ್ದವರು ಗಿಫ್ಟ್ ನೀಡಲು ಆತನ ಬಳಿ ಬಂದರೂ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ಗೇಮ್ ಆಡುವುದರಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದ. ಇದೇ ವಿಡಿಯೋ ಟಿಕ್ಟಾಕ್ನಲ್ಲೂ ಜಾಸ್ತಿ ಶೇರ್ ಆಗುತ್ತಿದೆ.