ಮಂಗಳೂರು: ಕರ್ನಾಟಕ ಜಲಮಂಡಳಿ ಕಚೇರಿಯಲ್ಲಿ ಎಲ್ಲ ಸಿಬ್ಬಂದಿಯ ಪ್ರೀತಿಗೆ ಪಾತ್ರವಾಗಿದ್ದ ರಾಣಿ ಎಂಬ ನಾಯಿ ಸಾವಿಗೀಡಾಗಿದ್ದು, ಸಿಬ್ಬಂದಿಯಲ್ಲಿ ದುಃಖ ತರಿಸಿದೆ.
ಕಳೆದ 11 ವರ್ಷಗಳಿಂದ ಮಂಗಳೂರಿನ ಕರ್ನಾಟಕ ಜಲಮಂಡಳಿ ಕಚೇರಿಯಲ್ಲಿ ಈ ರಾಣಿ ಹೆಸರಿನ ನಾಯಿ ವಾಸವಾಗಿತ್ತು. 11 ವರ್ಷಗಳ ಹಿಂದೆ ಎಲ್ಲಿಂದಲೋ ಬಂದಿದ್ದ ಈ ನಾಯಿ ಮರಿಯನ್ನು ಇಲ್ಲಿನ ಸಿಬ್ಬಂದಿ ಪ್ರೀತಿಯಿಂದ ಸಾಕಿದ್ದರು. ಜಲಮಂಡಳಿ ಕಚೇರಿಯಲ್ಲಿ ತಾನೂ ಕೂಡ ಒಂದು ಸಿಬ್ಬಂದಿ ಎಂಬಂತೆ ನಡೆದುಕೊಳ್ಳುತ್ತಿತ್ತು. ಕಾವಲುಗಾರರು ಕರ್ತವ್ಯದಲ್ಲಿದ್ದರೂ ರಾಣಿ ನಾಯಿ ತನ್ನ ಕಾಯಕ ಮಾತ್ರ ಮರೆಯುತ್ತಿರಲಿಲ್ಲ.