ಕರ್ನಾಟಕ

karnataka

ETV Bharat / briefs

ಯಮಕನಮರಡಿಯಲ್ಲಿ ಕಾರಿನಿಂದ ಚಿನ್ನ ಕಳ್ಳತನ ಪ್ರಕರಣ: ಸಿಒಡಿಯಿಂದ ಕಿಂಗ್​ಪಿನ್​ ಬಂಧನ

ಯಮಕನಮರಡಿ ಪೊಲೀಸ್​ ಠಾಣೆಯ ಬಳಿಯಿದ್ದ ಕಾರಿನಲ್ಲಿದ್ದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಸಿಒಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕಿಂಗ್​ಪಿನ್ ಕಿರಣ್​ ಎಂಬಾತನನ್ನು ಬಂಧಿಸಿದ್ದಾರೆ.

ಕಿಂಗ್​ ಪಿನ್​ ಕಿರಣ್​ ಬಂಧನ
ಕಿಂಗ್​ ಪಿನ್​ ಕಿರಣ್​ ಬಂಧನ

By

Published : Jun 7, 2021, 6:54 PM IST

ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್​ ಠಾಣೆಯ ಬಳಿ ಕಾರಿನಲ್ಲಿದ್ದ 4 ಕೆಜಿ 900 ಗ್ರಾಂ ಚಿನ್ನ ಕಳ್ಳತನ ಪ್ರಕರಣದ ಜಾಡು ಹಿಡಿದಿರುವ ಸಿಒಡಿ ಪೊಲೀಸರು, ಇಂದು ಕಿಂಗ್​ಪಿನ್ ಕಿರಣ್​ ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆಯಿಂದ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ನಡೆಲಾಗುತ್ತಿದೆ.

ಸುಮಾರು 3 ರಿಂದ ನಾಲ್ಕು ಜನ ಸಿಒಡಿ ಅಧಿಕಾರಿಗಳು ಸಂಕೇಶ್ವರಕ್ಕೆ ಭೇಟಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದವರನ್ನು ವಿಚಾರಣೆಗೆ ಒಳಪಡಿಸಿಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಕೇಶ್ವರ ಪೊಲೀಸ್​ ಠಾಣೆಯಲ್ಲಿ ಸತತ ಹಲವು ಗಂಟೆಗಳ ಕಾಲ ಕಿರಣ್​ನನ್ನು ಸಿಒಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ:ಯಮಕನಮರಡಿಯ ಠಾಣಾ ವ್ಯಾಪ್ತಿಯ ಹತ್ತರಗಿ ಟೋಲ್ ನಾಕಾ ಬಳಿ ಏಪ್ರಿಲ್ 9ರಂದು ರಾತ್ರಿ ಅಂದಿನ ಯಮಕನಮರಡಿ ಪಿಎಸ್​ಐ ಆಗಿದ್ದ ರಮೇಶ್​ ಪಾಟೀಲ್​ ಹಾಗೂ ಸಿಬ್ಬಂದಿ ಮಂಗಳೂರು ಮೂಲದ ತಿಲಕ್ ಪೂಜಾರ ಎನ್ನುವರಿಗೆ ಸೇರಿದ್ದ ಕಾರನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಆ ಕಾರಿನಲ್ಲಿ ಸಾಗಿಸುತ್ತಿದ್ದ 4 ಕೆಜಿ 900 ಗ್ರಾಂ ಚಿನ್ನವನ್ನು ಯಮಕನಮರಡಿ ಪೊಲೀಸರಿಗೆ ತಿಳಿಯದ ಹಾಗೇ ಪೊಲೀಸ್​ ಮೇಲಾಧಿಕಾರಿಗಳ ಸಹಕಾರದಿಂದ ಕಿಂಗ್ ಪಿನ್ ಕಿರಣ್​ ಎಗರಿಸಿದ್ದ ಎಂಬ ಆರೋಪವಿದೆ.

ಈ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಕೈಗೆತ್ತಿಕೊಂಡರು. ಈ ವೇಳೆ ಪ್ರಕರಣದಲ್ಲಿ ಕೆಲವು ಪೊಲೀಸ್​ ಮೇಲಾಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣದ ವಿಚಾರಣೆಯನ್ನು ಸಿಒಡಿಗೆ ವಹಿಸುವಂತೆ ಎಸ್ ಪಿ ನಿಂಬರಗಿ ಅವರು ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಸರ್ಕಾರ ಈ ಕೇಸನ್ನೂ ಸಿಒಡಿಗೆ ಒಪ್ಪಿಸಿದ್ದು, ಅಧಿಕಾರಿಗಳು ಕಿರಣ್​ ಎಂಬ ವ್ಯಕ್ತಿಯನ್ನು ಬಂಧಿಸಿ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details