ಕರ್ನಾಟಕ

karnataka

ETV Bharat / briefs

ಗೋಲ್ಡ್ ಸ್ಮಗ್ಲಿಂಗ್ ಕೇಸ್ : ಕಿಂಗ್​ಪಿನ್ ಕಿರಣ್ ವೀರನಗೌಡರ ಹುಬ್ಬಳ್ಳಿ ‌ನಿವಾಸದಲ್ಲಿ ಶೋಧ - ಹುಬ್ಬಳ್ಳಿ ಚಿನ್ನಕಳ್ಳತನ ಸುದ್ದಿ

ಕದ್ದಿರುವ ಚಿನ್ನ ಮನೆಯಲ್ಲೇ ಇಟ್ಟಿರುವ ಸಂಶಯದ ಮೇಲೆ‌ ಮನೆಯನ್ನ ಶೋಧ ನಡೆಸಿದರು. ಸತತ ಒಂದೂವರೆ ಗಂಟೆಗಳ‌ ಕಾಲ ಸಿಐಡಿ ಅಧಿಕಾರಿಗಳು ಮ‌‌‌ನೆಯಲ್ಲಿ ಪರಿಶೀಲಿಸಿದ್ದಾರೆ..

 ಹುಬ್ಬಳ್ಳಿ ‌ನಿವಾಸದಲ್ಲಿ ಶೋಧ
ಹುಬ್ಬಳ್ಳಿ ‌ನಿವಾಸದಲ್ಲಿ ಶೋಧ

By

Published : Jun 8, 2021, 7:53 PM IST

ಹುಬ್ಬಳ್ಳಿ :ಬೆಳಗಾವಿಯ ಗೋಲ್ಡ್ ಸ್ಮಗ್ಲಿಂಗ್ ಕೇಸ್ ತನಿಖೆ ತೀವ್ರಗೊಂಡಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿಂದು ಸಿಐಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಹುಬ್ಬಳ್ಳಿ ‌ನಿವಾಸದಲ್ಲಿ ಶೋಧ

ಚಿನ್ನಕಳುವಿನ ಕಿಂಗ್​ಪಿನ್ ಕಿರಣ್ ವೀರನಗೌಡರ ಹುಬ್ಬಳ್ಳಿಯ ಮನೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಶಿವಗಂಗಾ ಲೇಔಟ್​ನಲ್ಲಿರುವ ಕಿರಣ್ ಹಾಗೂ ಆತನ ತಂದೆ ವೀರನಗೌಡ ಅವರನ್ನು ವಿಚಾರಣೆ ನಡೆಸಿದರು‌.

ಹುಬ್ಬಳ್ಳಿ ‌ನಿವಾಸದಲ್ಲಿ ಶೋಧ

ಕದ್ದಿರುವ ಚಿನ್ನ ಮನೆಯಲ್ಲೇ ಇಟ್ಟಿರುವ ಸಂಶಯದ ಮೇಲೆ‌ ಮನೆಯನ್ನ ಶೋಧ ನಡೆಸಿದರು. ಸತತ ಒಂದೂವರೆ ಗಂಟೆಗಳ‌ ಕಾಲ ಸಿಐಡಿ ಅಧಿಕಾರಿಗಳು ಮ‌‌‌ನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details