ಕರ್ನಾಟಕ

karnataka

ETV Bharat / briefs

ಕಾಂಗ್ರೆಸ್​ ಪಕ್ಷ ಸೇರ್ಪಡೆಗೊಂಡ ಗಣಿ ಉದ್ಯಮಿ ಟಪಾಲ್​ ಗಣೇಶ್​! - ಟಪಾಲ್​ ಗಣೇಶ್​

ನಗರದ ಹೊರವಲಯದ ಗುಗ್ಗುರಟ್ಟಿಯ ವಿ.ಎಸ್ ಉಗ್ರಪ್ಪ ಅವರ ಮನೆಯಲ್ಲಿ ಇಂದು ನಡೆದ ಗೃಹ ಪ್ರವೇಶದ ನಂತರ ಗಣಿ ಉದ್ಯಮಿ ಟಪಾಲ್ ಗಣೇಶ್ ಕಾಂಗ್ರೆಸ್​​​ ಪಕ್ಷವನ್ನು ಸೇರಿಕೊಂಡರು.

ಟಪಾಲ್​ ಗಣೇಶ್​​

By

Published : Mar 30, 2019, 2:13 AM IST

ಬಳ್ಳಾರಿ: ಗಣಿ ಉದ್ಯಮಿ ಟಪಾಲ್ ಗಣೇಶ್ ಇಂದು ಕಾಂಗ್ರೆಸ್​​​ ಪಕ್ಷವನ್ನು ಸೇರಿದರು. ಅವರನ್ನು ಲೋಕಸಭಾ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಕಾಂಗ್ರೆಸ್​​​ ಪಕ್ಷದ ಶಾಲು ಹಾಕುವ ಮೂಲಕ ಬರಮಾಡಿಕೊಂಡರು‌.

ನಗರದ ಹೊರವಲಯದ ಗುಗ್ಗುರಟ್ಟಿಯ ವಿ.ಎಸ್ ಉಗ್ರಪ್ಪ ಅವರ ಮನೆಯಲ್ಲಿ ಇಂದು ನಡೆದ ಗೃಹ ಪ್ರವೇಶದ ನಂತರ ಗಣಿ ಉದ್ಯಮಿ ಟಪಾಲ್ ಗಣೇಶ್ ಕಾಂಗ್ರೆಸ್​​​ ಪಕ್ಷವನ್ನು ಸೇರಿಕೊಂಡರು.

ಟಪಾಲ್​ ಗಣೇಶ್​​

ಈ ವೇಳೆ ಈಟಿವಿ ಭಾರತ್​​ನೊಂದಿಗೆ ಮಾತನಾಡಿದ ಗಣಿ ಉದ್ಯಮಿ ಟಪಾಲ್ ಗಣೇಶ್​​, ವಿ.ಎಸ್ ಉಗ್ರಪ್ಪ ಒಳ್ಳೆಯ ವ್ಯಕ್ತಿ ಮತ್ತು ಪಾರ್ಲಿಮೆಂಟ್​​ನಲ್ಲಿ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಉದ್ದೇಶದಿಂದ ಕಾಂಗ್ರೆಸ್​​​ ಪಕ್ಷವನ್ನು ಸೇರಿದ್ದೇನೆ ಎಂದರು.ಈ ಹಿಂದೆ ಮಾಜಿ ಸಂಸದೆ ಬಸವರಾಜೇಶ್ವರಿ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೇ ಅವರ ನಂತರ ಬಿಜೆಪಿ ಶಾಂತ, ಶ್ರೀರಾಮುಲು ಸಂಸದರಾಗಿ ಅಧಿಕಾರಿಕ್ಕೆ ಬಂದರೂ, ಪಾರ್ಲಿಮೆಂಟ್​​ನಲ್ಲಿ ಮಾತನಾಡಿರುವುದನ್ನ ನಾನು ನೋಡಿಲ್ಲ ಎಂದರು.

ವಿ.ಎಸ್ ಉಗ್ರಪ್ಪ ಬಳ್ಳಾರಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ.ಅವರನ್ನು ಲೋಕಸಭಾ ಚುನಾವಣಾಯಲ್ಲಿ ಜಯಶೀಲರನ್ನಾಗಿ ಮಾಡುವ ಉದ್ಧೇಶ ನನ್ನದ್ದಾಗಿದೆ ಎಂದರು.

ABOUT THE AUTHOR

...view details