ಕರ್ನಾಟಕ

karnataka

ETV Bharat / briefs

ನಡುರಸ್ತೆಯಲ್ಲೇ ಬೃಹದಾಕಾರದ ಹೆಬ್ಬಾವು ಪ್ರತ್ಯಕ್ಷ.. ಜನರ ಎದೆ ನಡುಗಿಸಿದ ಗ್ರೀನ್​ ಅನಾಕೊಂಡ! - ಸ್ಥಳೀಯರು

ಸುಮಾರು 3 ಮೀಟರ್​ ಉದ್ದದ ಅನಾಕೊಂಡವೊಂದು ಬ್ರೇಜಿಲ್​ನ ಜನ ಅಡ್ಡಾಡುವ ರಸ್ತೆಯಲ್ಲಿ ಏಕಾಏಕಿಯಾಗಿ ಲಗ್ಗೆಯಿಟ್ಟಿತ್ತು.

ಬೃಹತ್​ ಹೆಬ್ಬಾವು

By

Published : Apr 30, 2019, 9:42 PM IST

ಬ್ರೇಜಿಲ್​​:ಬೃಹದಾಕಾರದ ಹೆಬ್ಬಾವೊಂದು ಬ್ರೆಜಿಲ್​ನ ನಡುರಸ್ತೆಯಲ್ಲಿ ಏಕಾಏಕಿ ಪ್ರತ್ಯಕ್ಷವಾಗಿ ಜನರು ಆತಂಕಗೊಳ್ಳುವಂತೆ ಮಾಡಿತ್ತು.

ಬೃಹದಾಕಾರದ ಹೆಬ್ಬಾವು ಪ್ರತ್ಯಕ್ಷ

ಬರೋಬ್ಬರಿ ಮೂರು ಮೀಟರ್​ ಉದ್ದ ಹಾಗೂ 30 ಕೆಜಿ ತೂಕದ ಹೆಬ್ಬಾವು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಮುಂದಾದಾಗ ವಾಹನ ಸವಾರರು ಅದನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಹೆಬ್ಬಾವು ರೋಡ್​ ದಾಟುತ್ತಿದ್ದ ವೇಳೆ ಕೆಲ ನಿಮಿಷಗಳ ಕಾಲ ವಾಹನ ನಿಲ್ಲಿಸಿ ಅದನ್ನ ಭಯದಿಂದಲೇ ನೋಡ್ತಿದ್ದರು.ಕಾಡಿನಿಂದ ಆಹಾರಕ್ಕಾಗಿ ಹೀಗೆ ರಸ್ತೆಯ ಒಂದು ಅಂಗುಲದಿಂದ ಇನ್ನೊಂದು ಅಂಗುಲಕ್ಕೆ ರಸ್ತೆ ಡಿವೈಡರ್‌ ಹತ್ಕೊಂಡು ಹೋಗುವ ದೃಶ್ಯ ಯಾರಿಗೇ ಆದರೂ ಭಯ ಹುಟ್ಟಿಸುವಂತಿತ್ತು.

ಬೃಹತ್​ ಹೆಬ್ಬಾವು ರೋಡ್​ ದಾಟುತ್ತಿದ್ದಾಗ ಸ್ಥಳೀಯರು ಅದನ್ನ ವಿಡಿಯೋ ಮಾಡಿ ಎಲ್ಲೆಡೆ ಹರಿಬಿಟ್ಟಿದ್ದಾರೆ. ಇದಕ್ಕೆ ಗ್ರೀನ್ ಅನಾಕೊಂಡ ಎಂದು ಹೆಸರಿಸಲಾಗಿದ್ದು, ಇಂತಹ ಹೆಬ್ಬಾವು ಬ್ರೆಜಿಲ್​ ಕಾಡಿನಲ್ಲಿ ಅತೀ ಹೆಚ್ಚು ಕಂಡು ಬರುತ್ತವೆ ಅಂತಾ ವನ್ಯಜೀವಿ ತಜ್ಞ ಹೇಳಿದ್ದಾರೆ.

ABOUT THE AUTHOR

...view details