ಕರ್ನಾಟಕ

karnataka

ETV Bharat / briefs

ಗೌತಿ ಮೇಲೆ ಆಪ್​​ನಿಂದ 'ಗಂಭೀರ' ಆರೋಪ... ಬಿಜೆಪಿ ಅಭ್ಯರ್ಥಿ ಮಾಡಿದ್ರಾ 'ನಕಲಿ' ಪ್ರಚಾರ..? - ಮನೀಷ್ ಸಿಸೋಡಿಯಾ

ಗುರುವಾರ ಆಪ್​ ಅಭ್ಯರ್ಥಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟು ಕರಪತ್ರದ ಕುರಿತಂತೆ ಹೇಳಿಕೆ ನೀಡಿದ ಬಳಿಕ ಗಂಭೀರ್ ಮೇಲೆ ಇದೀಗ ಆಪ್ ಮತ್ತೊಂದು ಆರೋಪ ಮಾಡಿದೆ.

ಗೌತಿ

By

Published : May 10, 2019, 10:35 PM IST

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಬಿಜಿಪಿ ಆಭ್ಯರ್ಥಿ ಗೌತಮ್ ಗಂಭೀರ್ ಹಾಗೂ ಆಮ್​ ಆದ್ಮಿ ಪಾರ್ಟಿ ನೇರಾನೇರ ಆರೋಪಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯ ಚುನಾವಣಾ ಕಣ ರಂಗೇರಿದೆ.

ಗುರುವಾರ ಆಪ್​ ಅಭ್ಯರ್ಥಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟು ಕರಪತ್ರದ ಕುರಿತಂತೆ ಹೇಳಿಕೆ ನೀಡಿದ ಬಳಿಕ ಗಂಭೀರ್ ಮೇಲೆ ಇದೀಗ ಆಪ್ ಮತ್ತೊಂದು ಆರೋಪ ಮಾಡಿದೆ.

ಪ್ರಚಾರದ ವೇಳೆ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ತಮ್ಮನ್ನೇ ಹೋಲುವ ವ್ಯಕ್ತಿಯನ್ನು ಬಳಸಿಕೊಂಡಿದ್ದಾರೆ ಎಂದು ಆಪ್​ ನಾಯಕ ಹಾಗೂ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಫೋಟೋ ಸಮೇತ ತಮ್ಮ ಆರೋಪಕ್ಕೆ ಸಾಕ್ಷ್ಯ ನೀಡಿರುವ ಮನೀಷ್ ಸಿಸೋಡಿಯಾ, ಕಾಂಗ್ರೆಸ್ ನಾಯಕ ಗೌರವ್ ಅರೋರಾ ಎನ್ನುವ ವ್ಯಕ್ತಿ ಕಾರಿನ ಮೇಲೆ ಕೈಬೀಸುತ್ತಾ ಸಾಗುತ್ತಿದ್ದರೆ ಅದೇ ಕಾರಿನ ಒಳಗಡೆ ಆರಾಮವಾಗಿ ಕುಳಿತಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿಯ ಕಲಬೆರಕೆ ಎಂದು ಕರೆದಿದ್ದಾರೆ.

ಮನೀಷ್ ಸಿಸೋಡಿಯಾ ಕೆಲ ಹೊತ್ತಿನಲ್ಲಿ ತಮ್ಮ ಟ್ವೀಟ್​ ಅನ್ನು ಡಿಲೀಟ್ ಮಾಡಿದ್ದಾರೆ. ಸದ್ಯ ಈ ಆರೋಪಕ್ಕೆ ಗೌತಮ್ ಗಂಭೀರ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೆಹಲಿಯಲ್ಲಿ ಇದೇ ಭಾನುವಾರ(ಮೇ 12)ರಂದು ಮತದಾನ ನಡೆಯಲಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.

ABOUT THE AUTHOR

...view details