ಕರ್ನಾಟಕ

karnataka

ETV Bharat / briefs

ಆತನನ್ನ ಮನೋ ವೈದ್ಯರ ಬಳಿ ಕರೆದ್ಯೊಯಬೇಕು: ಆಫ್ರಿದಿಗೆ ಟಾಂಗ್​​ ಕೊಟ್ಟ ಗಂಭೀರ್​​​! - ಗೌತಮ್ ಗಂಭೀರ್​

ತಮ್ಮ ಪುಸ್ತಕದಲ್ಲಿ ಡಾನ್ ಬ್ರಾಡ್ಮನ್ ಅಥವಾ ಜೇಮ್ಸ್‌ ಬಾಂಡ್‌ ಮಿಶ್ರಣದಂತೆ ಗಂಭೀರ್ ವರ್ತಿಸುತ್ತಾರೆ.  ಗಂಭೀರ್‌ ವರ್ತನೆ ಸರಿಯಿಲ್ಲ. ಅವರಿಗೆ ವ್ಯಕ್ತಿತ್ವವಿಲ್ಲ ಎಂದು ಬರೆದುಕೊಂಡಿದ್ದರು.

ಆಫ್ರಿದಿ

By

Published : May 4, 2019, 4:19 PM IST

ನವದೆಹಲಿ:ಪಾಕ್​ ಕ್ರಿಕೆಟ್​ ತಂಡದ ಮಾಜಿ ಕ್ರಿಕೆಟರ್​ ಶಾಹಿದ್​ ಆಫ್ರಿದಿ ತಮ್ಮ ಆಟೋಬಯೋಗ್ರಾಫಿಯಲ್ಲಿ ಭಾರತದ ಗೌತಮ್​ ಗಂಭೀರ್​ ವಿರುದ್ಧ ವಾಗ್ದಾಳಿ ನಡೆಸಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗಂಭೀರ್​ ಕೂಡ ಬೂಮ್​ ಬೂಮ್​ ಆಫ್ರಿದಿ ಮೇಲೆ ಹರಿಹಾಯ್ದಿದ್ದಾರೆ.

ತಮ್ಮ ಪುಸ್ತಕದಲ್ಲಿ ಡಾನ್ ಬ್ರಾಡ್ಮನ್ ಅಥವಾ ಜೇಮ್ಸ್‌ ಬಾಂಡ್‌ ಮಿಶ್ರಣದಂತೆ ಗಂಭೀರ್ ವರ್ತಿಸುತ್ತಾರೆ. ಗಂಭೀರ್‌ ವರ್ತನೆ ಸರಿಯಿಲ್ಲ. ಅವರಿಗೆ ವ್ಯಕ್ತಿತ್ವವಿಲ್ಲ ಎಂದು ಬರೆದುಕೊಂಡಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿರುವ ಗಂಭೀರ್‌, ಆತನೊಬ್ಬ ಹುಚ್ಚ. ವೈದ್ಯಕೀಯ ಕಾರಣಕ್ಕಾಗಿ ಭಾರತವು ಈಗಲೂ ಪಾಕಿಸ್ತಾನಿಯರಿಗೆ ವೀಸಾ ನೀಡುತ್ತಿದೆ. ನಿನ್ನನ್ನು ಸ್ವತಃ ನಾನೇ ಮನೋ ತಜ್ಞರ ಬಳಿಗೆ ಕರೆದೊಯ್ಯುತ್ತೇನೆ ಎಂದು ಗುಡುಗಿ ಟ್ವೀಟ್​ ಮಾಡಿದ್ದಾರೆ.

ಈ ಹಿಂದೆ ಮೈದಾನದಲ್ಲೇ ಗಂಭೀರ್​ ಹಾಗೂ ಆಫ್ರಿದಿ ಜಗಳವಾಡಿದ್ದು ಭಾರೀ ಸುದ್ದಿಯಾಗಿತ್ತು. ಇನ್ನು ಆಫ್ರಿದಿ ತಮ್ಮ ಆಟೋಬಯೋಗ್ರಾಫಿಯಲ್ಲಿ ತಮ್ಮ ವಯಸ್ಸಿನ ವಿಷಯದ ಕುರಿತು ಕೂಡ ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details