ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಟ ಆಗಿ ಅಭಿನಯಿಸುತ್ತಿರುವ ರಕ್ಷ್ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ಕಾಣಿಸಿತ್ತು. ಸದ್ಯ ಅವರು ಕೋವಿಡ್ನಿಂದ ಸಂಪೂರ್ಣ ಗುಣಮುಖವಾಗಿದ್ದಾರೆ. ಕೊರೊನಾದ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ರಕ್ಷ್.
ಕೊರೊನಾದ ಹಾವಳಿ ಜಾಸ್ತಿಯಾಗುತ್ತಿರುವ ಕಾರಣ ಲಾಕ್‌ಡೌನ್ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಅದೇ ಕಾರಣದಿಂದ ಗಟ್ಟಿಮೇಳ ಧಾರಾವಾಹಿಯ ಹೆಚ್ಚಿನ ಸಂಚಿಕೆಗಳನ್ನು ಶೂಟ್ ಮಾಡುವ ಕಾರ್ಯ ನಡೆಯುತ್ತಿತ್ತು.
ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ನಾವು ಧಾರಾವಾಹಿಯ ಚಿತ್ರೀಕರಣ ಮಾಡುತ್ತಿದ್ದೆವು. ಧಾರಾವಾಹಿಯ ನಿರ್ಮಾಪಕ ನಾನೇ ಆಗಿರುವುದರಿಂದ ಜವಾಬ್ದಾರಿ ಕೂಡ ಹೆಚ್ಚಿತ್ತು. ಎಲ್ಲರ ಸುರಕ್ಷತೆ ಬಗ್ಗೆ ನಾನು ಸದಾ ಗಮನ ಹರಿಸುತ್ತಿದ್ದ ನನಗೆ ಕೋವಿಡ್-19 ಪಾಸಿಟಿವ್ ಬಂತು" ಎನ್ನುತ್ತಾರೆ ರಕ್ಷ್.
ಕೋವಿಡ್ 19 ಪಾಸಿಟಿವ್ ಬಂದಿದೆ ಎಂದು ತಿಳಿದ ಕೂಡಲೇ ನಾನು ಮನೆಯಲ್ಲಿ ಐಸೋಲೆಟ್ ಆದೆ. ಇದರ ಜೊತೆಗೆ ನನ್ನ ಪತ್ನಿಗೂ ರೋಗ ಲಕ್ಷಣಗಳು ಕಾಣಿಸಿತ್ತು. ನಂತರ ಇಬ್ಬರೂ ಹೋಮ್ ಕ್ವಾರಂಟೈನ್ ಆದೆವು. ಮೊದಲಿಗೆ ನೆಗಡಿ, ಕೆಮ್ಮು ಬಂದಿತ್ತು. ರಾತ್ರಿ ಹೊತ್ತು ಜ್ವರ ಕಾಣಿಸಿಕೊಳ್ಳುತ್ತಿತ್ತು.
ಇದರ ಜೊತೆಗೆ ಜಾಯಿಂಟ್ ಪೇನ್ ಇತ್ತು. ಕೋವಿಡ್-19 ಪಾಸಿಟಿವ್ ಬಂದ ಬಳಿಕ ನನ್ನ ತೂಕ ಕೂಡ ಇಳಿಕೆ ಆಯ್ತು. ಜೊತೆಗೆ ಮನೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿದೆವು. ಕೆಲ ದಿನಗಳ ನಂತರ ನಮ್ಮಿಬ್ಬರಿಗೂ ನೆಗೆಟಿವ್ ಬಂತು" ಎಂದು ಹೇಳಿದ್ದಾರೆ ರಕ್ಷ್.
"ನನ್ನ ತಾಯಿಯಂತೂ ಕಳೆದ ಕೆಲವು ತಿಂಗಳುಗಳಿಂದ ಮನೆಯಿಂದ ಹೊರಗಡೆ ಹೋಗಿರಲಿಲ್ಲ. ನನ್ನ ನಂತರ ಅವರಿಗೂ ಪಾಸಿಟಿವ್ ಕಂಡು ಬಂತು. ಇದರ ಜೊತೆಗೆ ಕೊರೊನಾದಿಂದ ಗುಣಮುಖರಾಗಿದ್ದ ನನ್ನ ಪತ್ನಿ ತವರಿಗೆ ತೆರಳಿದ್ದಳು.
ಆಕೆ ಅಲ್ಲಿಗೆ ಹೋದ ನಂತರ ಆಕೆಯ ತಂದೆ--ತಾಯಿಗೂ ಪಾಸಿಟಿವ್ ಬಂತು. ನೆಗೆಟಿವ್ ಕಂಡು ಬಂದರೂ ನಮ್ಮ ದೇಹದಲ್ಲಿ ವೈರಾಣು ಇರುತ್ತದೆ ಎನ್ನುವ ಅಂಶ ತಿಳಿದದ್ದು ಆಗಲೇ. ಅದೇ ಕಾರಣದಿಂದ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಕಂಡು ಬಂದರೂ ನಾವು ಹುಷಾರಾಗಿ ಇರಬೇಕು" ಎನ್ನುತ್ತಾರೆ ರಕ್ಷ್.