ಮಂಗಳೂರು: ನಿಂತಿದ್ದ ತ್ಯಾಜ್ಯ ವಿಲೇವಾರಿ ಮಿನಿ ಲಾರಿ ಏಕಾಏಕಿ ಚಲಿಸಿದ ಪರಿಣಾಮ ಐದು ವಾಹನಗಳಿಗೆ ಹಾನಿ ಮಾಡಿ, ಕೋಳಿ ಮಾರಾಟದ ಅಂಗಡಿಗೆ ಡಿಕ್ಕಿ ಹೊಡೆದ ಘಟನೆ ಇಂದು ನಗರದ ಕಂಕನಾಡಿ ಬಳಿ ಸಂಭವಿಸಿದೆ.
ಏಕಾಏಕಿ ಚಲಿಸಿ ಅಂಗಡಿ, 5 ವಾಹನಗಳಿಗೆ ಡಿಕ್ಕಿ ಹೊಡೆದ ತ್ಯಾಜ್ಯ ವಿಲೇವಾರಿ ಲಾರಿ - mangalore latest news
ತ್ಯಾಜ್ಯ ವಿಲೇವಾರಿ ಮಾಡಲು ಕಂಕನಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಆ್ಯಂಟನಿ ವೇಸ್ಟ್ ಸಂಸ್ಥೆಗೆ ಸೇರಿದ ಈ ಲಾರಿಯನ್ನು ಚಾಲಕ ಯಾವುದೋ ಕಾರಣಕ್ಕೆ ಸ್ವಲ್ಪ ದೂರ ತೆರಳಿದ್ದ. ಈ ಸಂದರ್ಭ ಏಕಾಏಕಿ ಚಲಿಸಿದೆ.
garbage disposal truck that collided 5 vehicles
ತ್ಯಾಜ್ಯ ವಿಲೇವಾರಿ ಮಾಡಲು ಕಂಕನಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಆ್ಯಂಟನಿ ವೇಸ್ಟ್ ಸಂಸ್ಥೆಗೆ ಸೇರಿದ ಈ ಲಾರಿಯನ್ನು ನಿಲ್ಲಿಸಿ ಚಾಲಕ ಯಾವುದೋ ಕಾರಣಕ್ಕೆ ಸ್ವಲ್ಪ ದೂರ ತೆರಳಿದ್ದ. ಈ ಸಂದರ್ಭ ಏಕಾಏಕಿ ಚಲಿಸಿದ ಮಿನಿ ಲಾರಿ ಎರಡು ದ್ವಿಚಕ್ರ ವಾಹನಗಳು ಎರಡು ಕಾರುಗಳು, ಒಂದು ಟೆಂಪೊ ಹಾನಿಗೊಳಿಸಿ ಕೋಳಿ ಮಾರಾಟದ ಅಂಗಡಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ದ್ವಿಚಕ್ರ ವಾಹನವೊಂದು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ ಕೋಳಿ ಮಾರಾಟದ ಅಂಗಡಿಯ ಜನರೇಟರ್ಗೂ, ಬಾಗಿಲು ಗಾಜಿಗೆ ಹಾನಿಯಾಗಿದೆ. ಘಟನೆ ನಡೆಯುವ ಸಂದರ್ಭ ಅಲ್ಲಿಯೇ ಇದ್ದ ಲಾರಿ ಚಾಲಕ ಪರಾರಿಯಾಗಿದ್ದಾನೆ.