ಕರ್ನಾಟಕ

karnataka

ETV Bharat / briefs

ಲಾಕ್​ಡೌನ್ ನಡುವೆಯೂ ಹೋಟೆಲ್​ನಲ್ಲಿ ಜೂಜಾಟ: 27 ಜನರ ಬಂಧನ - ಬೆಂಗಳೂರು ಇತ್ತೀಚಿನ ಸುದ್ದಿ

ಹಲಸೂರು‌‌ ಮುಖ್ಯ ರಸ್ತೆಯ ಪಾಮ್‌ ಟ್ರೀ ಹೋಟೆಲ್​ನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 27 ಮಂದಿಯನ್ನು ಬಂಧಿಸಿದ್ದಾರೆ.

gambling
gambling

By

Published : May 20, 2021, 10:37 AM IST

ಬೆಂಗಳೂರು: ರಾಜ್ಯಾದ್ಯಂತ ಲಾಕ್​ಡೌನ್​ ಘೋಷಣೆಯಾಗಿದೆ. ಈ ನಡುವೆ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 27 ಮಂದಿಯನ್ನು ಬಂಧಿಸಿದ್ದಾರೆ.

ಹಲಸೂರು‌‌ ಮುಖ್ಯ ರಸ್ತೆಯ ಪಾಮ್‌ ಟ್ರೀ ಹೋಟೆಲ್​ನಲ್ಲಿ ಜೂಜಾಟ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಹೋಟೆಲ್ ಮ್ಯಾನೇಜರ್ ಸೇರಿ 27 ಮಂದಿಯನ್ನು ಬಂಧಿಸಿದ್ದಾರೆ.

ಕೊರೊನಾ ಲಾಕ್​ಡೌನ್​ ಇದ್ದರೂ ಹೋಟೆಲ್​ನಲ್ಲಿ ಜನರನ್ನು ಸೇರಿಸಿ ಜೂಜಾಟ ನಡೆಸುತ್ತಿದ್ದರು. ಬಂಧಿತರಿಂದ 5 ಲಕ್ಷ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತರನ್ನು ಇಂದಿರಾನಗರ ಪೊಲೀಸರಿಗೆ ಒಪ್ಪಿಸಲಾಗಿದೆ‌‌.

ABOUT THE AUTHOR

...view details