ಕರ್ನಾಟಕ

karnataka

ETV Bharat / briefs

'ಜಸ್ಟೀಸ್‌ ಲೀಗ್' ಚಿತ್ರೀಕರಣ ಸಂದರ್ಭ ನನ್ನ ವೃತ್ತಿಜೀವನಕ್ಕೆ ಬೆದರಿಕೆ ಹಾಕಿದ್ದಾರೆ : ಗಾಲ್ ಗಾಡೋಟ್ - Washington

ನಾನು ಏನಾದರೂ ಮಾಡಲು ಮುಂದಾದರೆ ನನ್ನ ವೃತ್ತಿಜೀವನವು ಶೋಚನೀಯವಾಗುತ್ತದೆ ಎಂದು ಅವನು ಹೆದರಿಸಿದ್ದಾನೆ ಹೀಗಾಗಿ ನಾನು ಎಲ್ಲವನ್ನೂ ನಿಭಾಯಿಸಿದೆ ಎಂದು ತಿಳಿಸಿದ್ದಾರೆ..

gal-gadot-says-joss-whedon-threatened-my-career-while
gal-gadot-says-joss-whedon-threatened-my-career-while

By

Published : May 10, 2021, 5:51 PM IST

ವಾಷಿಂಗ್ಟನ್: ಹಾಲಿವುಡ್ ತಾರೆ ಗಾಲ್ ಗಾಡೋಟ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, 'ಜಸ್ಟೀಸ್ ಲೀಗ್' ನಿರ್ದೇಶಕ ಜಾಸ್ ವೆಡಾನ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ತಮ್ಮ ಅನುಭವವನ್ನು ತೆರೆದಿಟ್ಟಿದ್ದು, ಅವರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವಾಗ ಅವರು ನಿರ್ದೇಶಕರೊಂದಿಗಿನ ತಮ್ಮ ಅನುಭವದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡರು. ಕೌಟುಂಬಿಕ ಕಾರಣದಿಂದ ಈ ಸಿನಿಮಾದಿಂದ ಝಾಕ್ ಸ್ನೈಡರ್ ಹಿಂದೆ ಸರಿದ ನಂತರ 'ಜಸ್ಟೀಸ್ ಲೀಗ್' ಚಿತ್ರಕ್ಕೆ (ಮತ್ತು ಮರು-ಚಿತ್ರೀಕರಣಕ್ಕೆ) ಇವರು ಕಾಲಿಟ್ಟಿದ್ದರು.

ನಾನು ಜಾಸ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಯಿತು. ಮೂಲತಃ, ಅವನು ನನ್ನ ವೃತ್ತಿಜೀವನಕ್ಕೆ ಬೆದರಿಕೆ ಹಾಕಿದ್ದಾನೆ.

ನಾನು ಏನಾದರೂ ಮಾಡಲು ಮುಂದಾದರೆ ನನ್ನ ವೃತ್ತಿಜೀವನವು ಶೋಚನೀಯವಾಗುತ್ತದೆ ಎಂದು ಅವನು ಹೆದರಿಸಿದ್ದಾನೆ ಹೀಗಾಗಿ ನಾನು ಎಲ್ಲವನ್ನೂ ನಿಭಾಯಿಸಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details