ಭಯ ಬೇಡ, ಸಕಾಲಕ್ಕೆ ಬಿತ್ತನೆ ಬೀಜ ಸಿಗಲಿದೆ: ಸಂಸದ ಶಿವಕುಮಾರ ಉದಾಸಿ - Gadag Seeds distribution program
ರೈತರಿಗೆ ಬಿತ್ತನೆ ಬೀಜಗಳನ್ನ ವಿತರಣೆ ಮಾಡುವುದರ ಮೂಲಕ ಬೀಜ ವಿತರಣಾ ಕಾರ್ಯಕ್ರಮಕ್ಕೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.
Seeds distribution program
ಹಾನಗಲ್: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮವನ್ನ ಸಾಂಕೇತಿಕವಾಗಿ ಬೀಜ ವಿತರಣೆ ಮಾಡುವ ಮೂಲಕ ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿವೆ. ರೈತರು ಭಯ ಪಡಬೇಕಿಲ್ಲ. ಎಲ್ಲಾ ರೈತರಿಗೂ ಸೂಕ್ತ ಸಮಯದಲ್ಲಿ ಬಿತ್ತನೆ ಬೀಜ ಸಿಗುತ್ತದೆ ಎಂದು ಭರವಸೆ ನೀಡಿದರು.