ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಲೇಹ್ನಲ್ಲಿ ಮತ್ತೆ ಹಿಮಪಾತವಾಗುತ್ತಿರುವುದರಿಂದ ಶ್ರೀನಗರ-ಲೇಹ್ ಹೆದ್ದಾರಿಯನ್ನು ಮತ್ತೊಮ್ಮೆ ಮುಚ್ಚಲಾಗಿದೆ. ನಿನ್ನೆಯಷ್ಟೇ ಈ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಲೇಹ್ನಲ್ಲಿ ಹಿಮಪಾತ: ಶ್ರೀನಗರ-ಲೇಹ್ ಹೆದ್ದಾರಿ ಮತ್ತೆ ಬಂದ್
ಲೇಹ್ನಲ್ಲಿ ಹಿಮಪಾತವಾಗಿದೆ. ನಾಲ್ಕು ತಿಂಗಳ ಬಳಿಕ ಗಡಿ ರಸ್ತೆಗಳ ಸಂಸ್ಥೆ ಬುಧವಾರವಷ್ಟೇ ಹೆದ್ದಾರಿಯನ್ನು ತೆರೆದಿತ್ತು. ಏಕಮುಖ ಸಂಚಾರ ಮತ್ತು ಸಣ್ಣ ವಾಹನಗಳನ್ನು ಮಾತ್ರ ಹೆದ್ದಾರಿಯಲ್ಲಿ ಓಡಿಸಲು ಅನುಮತಿಸಲಾಯಿತು.
ಇಂದು ಬೆಳಗ್ಗೆ ದ್ರಾಸ್, ಮಣಿಮಾರ್ಗ್, ಸೋನಮಾರ್ಗ್ ಮತ್ತು ಜೊಜಿಲಾ ಪ್ರದೇಶದಲ್ಲಿ ಹಿಮಪಾತವಾಗಿದ್ದು, ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಸಂಚಾರವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ. ನಾಲ್ಕು ತಿಂಗಳ ಬಳಿಕ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿನ್ನೆಯಷ್ಟೇ ತೆರೆದಿತ್ತು ಹಾಗೂ ಏಕಮುಖ ಸಂಚಾರ ಮತ್ತು ಸಣ್ಣ ವಾಹನಗಳನ್ನು ಮಾತ್ರ ಹೆದ್ದಾರಿಯಲ್ಲಿ ಓಡಿಸಲು ಅನುಮತಿಸಲಾಯಿತು. 434 ಕಿ.ಮೀ ಉದ್ದದ ಶ್ರೀನಗರ-ಲೇಹ್ ಹೆದ್ದಾರಿಯನ್ನು ಅತಿಯಾದ ಹಿಮಪಾತವಾಗುತ್ತಿದ್ದ ಕಾರಣ ಡಿಸೆಂಬರ್ 31 ರಂದು ಮುಚ್ಚಲಾಗಿತ್ತು.
ರಸ್ತೆಯಲ್ಲಿ ಹಲವಾರು ಅಡಿಗಳವರೆಗೆ ಹಿಮ ಸಂಗ್ರಹವಾಗಿದ್ದರಿಂದ ಹೆದ್ದಾರಿಯು ಸುಮಾರು 112 ದಿನಗಳವರೆಗೆ ಮುಚ್ಚಲ್ಪಟ್ಟಿತ್ತು. ಬಿಆರ್‌ಒ ಹಲವಾರು ಬಾರಿ ಹಿಮವನ್ನು ತೆರವುಗೊಳಿಸುತ್ತಿದ್ದರೂ, ನಿರಂತರವಾಗಿ ಹಿಮಪಾತದಿಂದಾಗಿ ಹೆದ್ದಾರಿ ಸಂಚಾರವನ್ನು ಮತ್ತೆ ಮುಚ್ಚಬೇಕಾಯಿತು.