ಪ್ಯಾರಿಸ್: 21 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ವಿಡ್ಜರ್ಲೆಂಡ್‌ನ ರೋಜರ್ ಫೆಡರರ್ 3ನೇ ಸುತ್ತಿನ ಪಂದ್ಯದಲ್ಲಿ ಕ್ಯಾಸ್ಪರ್ ರುಡ್ ವಿರುದ್ಧ ಗೆಲ್ಲುವ ಮೂಲಕ ತಮ್ಮ 20 ವರ್ಷಗಳ ಟೆನ್ನಿಸ್ ವೃತ್ತಿಜೀವನದಲ್ಲಿ ಅಪ್ಪ-ಮಗ ಇಬ್ಬರ ವಿರುದ್ಧವೂ ಸೆಣಸಿದ ಖ್ಯಾತಿಗೆ ಪಾತ್ರರಾದರು.
1999 ರಲ್ಲಿ ಫ್ರೆಂಚ್ ಓಪನ್ ಪದಾರ್ಪಣೆ ಮಾಡಿದ್ದ 17 ವರ್ಷದ ಫೆಡರರ್ ತಮ್ಮ ಮೊದಲನೇ ಸುತ್ತಿನಲ್ಲೇ ಪ್ಯಾಟ್ ರಾಫ್ಟರ್ ವಿರುದ್ಧ ಸೆಣಸಾಡಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ಅದೇ ಟೂರ್ನಿಯಲ್ಲಿ ಕ್ರಿಶ್ಚಿಯನ್ ಎಂಬಾತ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದರು. ಇದೀಗ 20 ವರ್ಷಗಳ ನಂತರ ಅವರ ಮಗ ಕ್ಯಾಸ್ಪರ್ ರುಡ್ ವಿರುದ್ಧ ಪ್ರೆಂಚ್ ಓಪನ್ನ ಮೂರನೇ ಸುತ್ತಿನಲ್ಲಿ ಸೆಣಸಾಡಿ 6-3,6-1,7-6(8) ಜಯ ಸಾಧಿಸಿದ್ದಾರೆ. ಈ ಜಯ ಫೆಡರರ್ ಅವರ 400ನೇ ಗ್ರ್ಯಾಂಡ್ಸ್ಲಾಮ್ ಜಯವಾಗಿತ್ತು.