ಕರ್ನಾಟಕ

karnataka

ETV Bharat / briefs

ಸರ್ಕಾರಿ ಶಾಲೆ ಮಕ್ಕಳಿಗೆ ಫ್ರೀ ಪಿಕಪ್​, ಡ್ರಾಪ್​... ವಾರೆವ್ಹಾ ಬೇಕಿತ್ತು ಇಂಥ ಯೋಜನೆ..! - ಸಮಗ್ರ ಶಿಕ್ಷಣ ಕಾರ್ಯಕ್ರಮ

ತೆಲಂಗಾಣದಲ್ಲಿರುವ ಒಟ್ಟು 20,012 ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪಿಕಪ್​ ಮತ್ತು ಡ್ರಾಪ್​ ಸೇವೆಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವಂತೆ ಸಿಎಂ ಕೆಸಿಆರ್​ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ.

ಸರ್ಕಾರಿ ಶಾಲೆ

By

Published : May 21, 2019, 8:08 AM IST

ಹೈದರಾಬಾದ್​: ಸರ್ಕಾರಿ ಶಾಲೆ ಮಕ್ಕಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂಬ ಕೂಗುಗಳ ಮಧ್ಯೆಯೇ ತೆಲಂಗಾಣ ಸರ್ಕಾರ ಒಂದು ಒಳ್ಳೆಯ ನಿರ್ಧಾರ ಪ್ರಕಟಿಸುವ ಮೂಲಕ ದೇಶದ ಗಮನ ಸೆಳೆದಿದೆ.

ತೆಲಂಗಾಣದಲ್ಲಿರುವ ಒಟ್ಟು 20,012 ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪಿಕಪ್​ ಮತ್ತು ಡ್ರಾಪ್​ ಸೇವೆಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವಂತೆ ಸಿಎಂ ಕೆಸಿಆರ್​ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ.

ತೆಲಂಗಾಣ ಸಮಗ್ರ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಈ ಮಕ್ಕಳನ್ನು ವ್ಯಾನ್​​​​ಗಳು ಅಥವಾ ಆಟೊ ರಿಕ್ಷಾ ಮೂಲಕ ಶಾಲೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ತೆಲಂಗಾಣ ಸರ್ಕಾರ ಕೈಗೊಂಡಿರುವ ಈ ನಿರ್ಧಾರದ ಬಗ್ಗೆ ಸರ್ಕಾರಿ ಶಾಲೆ ಮಕ್ಕಳ ಪೋಷಕರು ಖುಷಿ ವ್ಯಕ್ತಪಡಿಸಿದ್ದು, ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ.

ABOUT THE AUTHOR

...view details