ಕರ್ನಾಟಕ

karnataka

ETV Bharat / briefs

ಕೋವಿಡ್​ ರೋಗಿಗಳಿಗೆ ಉಚಿತ ಸೇವೆ.. ದಿನದ 24 ಗಂಟೆಯೂ ಆಟೋ ಸೇವೆಯಲ್ಲಿ ತೊಡಗಿದ್ದಾರೆ ಆಕಾಶ್ - ದಿನದ 24 ಗಂಟೆಯೂ ಆಟೋ ಸೇವೆಯಲ್ಲಿ ತೊಡಗಿದ್ದಾರೆ ಆಕಾಶ್

ಆಕಾಶನ ಮಾನವೀಯತೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಕಾಶ ನವ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿಯೂ ಕನ್ನಡ ಸೇವೆ ಮಾಡುತ್ತಿದ್ದಾರೆ. ಈ ಹಿಂದೆ ಸೈನಿಕರಿಗೆ ಉಚಿತ ಆಟೋ ಸೇವೆ ನೀಡುತ್ತಿದ್ದರು. ಇದೀಗ ಕೊರೊನಾ ರೋಗಿಗಳಿಗೆ ಉಚಿತ ಸೇವೆ ನೀಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..

auto
auto

By

Published : May 16, 2021, 8:02 PM IST

Updated : May 16, 2021, 10:06 PM IST

ಕಲಬುರಗಿ :ಕೊರೊನಾ ರೋಗಿಗಳೆಂದರೆ ಜನ ಕಿಲೋಮೀಟರ್ ದೂರ ಹೋಗುತ್ತಿದ್ದಾರೆ. ಇನ್ನೊಂದು ಕಡೆ ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ ಸಿಗದೆ ಹಲವರು ಪ್ರಾಣ ಬಿಡುತ್ತಿದ್ದಾರೆ‌.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲೋರ್ವ ಯುವಕ ತನ್ನ ಸ್ವಂತ ಆಟೋದಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಸೇವೆ ನೀಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾನೆ.

ಆಟೋಚಾಲಕ ಆಕಾಶ ಎಂಬುವ ಯುವಕ ಕೋವಿಡ್ ರೋಗಿಗಳಿಗೆ ಉಚಿತ ಸೇವೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕೊರೊನಾ ಸೇರಿದಂತೆ ಯಾವುದೇ ತುರ್ತು ವೈದ್ಯಕೀಯ ಸೇವೆಗಾಗಿ ಕರೆ ಮಾಡಿದ್ರೆ ಸಾಕು, ಆಟೋ ಚಾಲಕ ಆಕಾಶ್ ತಾವಿದ್ದಲ್ಲಿಗೆ ಬಂದು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಕಲಬುರಗಿ ನಗರದಲ್ಲಿ ಆಟೋ ಚಾಲಕ ದಿನದ 24 ಗಂಟೆ ಈ ಮಾನವೀಯತೆ ಕಾರ್ಯದಲ್ಲಿ ತೊಡಗಿದ್ದಾರೆ.

ಕೋವಿಡ್​ ರೋಗಿಗಳಿಗೆ ಉಚಿತ ಸೇವೆ

ಲಾಕ್‌ಡೌನ್‌ನಲ್ಲಿ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಖಾಸಗಿ ವಾಹನ, ಆಟೋ, ಆ್ಯಂಬುಲೆನ್ಸ್‌ಗಳು ಸಿಗದ ಹಿನ್ನಲೆಯಲ್ಲಿ ಅನೇಕ ರೋಗಿಗಳು ಸಾವನ್ನಪ್ಪುತ್ತಿದ್ದು, ಆಯಾ ರೋಗಿಗಳಿಗೆ ಆಯಾ ಆಸ್ಪತ್ರೆಗೆ ಬಿಡುವ ಮಾನವೀಯತೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಆಕಾಶನ ಮಾನವೀಯತೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಕಾಶ ನವ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿಯೂ ಕನ್ನಡ ಸೇವೆ ಮಾಡುತ್ತಿದ್ದಾರೆ. ಈ ಹಿಂದೆ ಸೈನಿಕರಿಗೆ ಉಚಿತ ಆಟೋ ಸೇವೆ ನೀಡುತ್ತಿದ್ದರು. ಇದೀಗ ಕೊರೊನಾ ರೋಗಿಗಳಿಗೆ ಉಚಿತ ಸೇವೆ ನೀಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೋವಿಡ್ ರೋಗಿಗಳಿಗೆ ವಾಹನ ಸಿಗದೆ ಸಾವನ್ನಪ್ಪುತ್ತಿರುವದಿಂದ ರೋಗಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ರೋಗಿಗಳ ಸೇವೆಗೆ ಆಟೋ ಸೇವೆಯನ್ನು ನಾಳೆಯಿಂದ ಪ್ರಾರಂಭಿಸಲಾಗುವುದು.

ಈಗಾಗಲೇ ಕಲಬುರಗಿ ನಗರದಲ್ಲಿ ಸಾಂಕೇತಿಕವಾಗಿ ಒಂದು ಆಟೋ ಕರ್ನಾಟಕ ನವನಿರ್ಮಾಣ ಸೇನೆ ಕಲಬುರಗಿ ಅಟೋ ಚಾಲಕರ ಘಟಕದ ಅಧ್ಯಕ್ಷ ಆಕಾಶ ದೇವನೂರ ಅವರು ಸೇನೆ ನೀಡುತ್ತಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಕರ್ನಾಟಕ ನವಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ.ಎನ್.ದೇಗಾಂವ ಅವರು ತಿಳಿಸಿದ್ದಾರೆ.

ಕೋವಿಡ್​ ಸೊಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾವಿರಾರು ರೂಪಾಯಿ ಸುಲಿಗೆ ಮಾಡುವವರ ಮಧ್ಯೆ ಕಲಬುರಗಿ ನಗರದಲ್ಲಿ ಆಟೋ ಚಾಲಕ ಉಚಿತ ಆಟೋ ಸೇವೆ ನೀಡುವ ಮೂಲಕ ಭೇಷ್ ಎನಿಸಿಕೊಡಿದ್ದಾರೆ. ಜಿಲ್ಲಾಡಳಿತ ಇಂತಹ ಉತ್ತಮ‌ ಕಾರ್ಯ ಮಾಡುವವರ ಬೆನ್ನಿಗೆ ನಿಂತುಕೊಳ್ಳಬೇಕಾಗಿದೆ.

Last Updated : May 16, 2021, 10:06 PM IST

ABOUT THE AUTHOR

...view details