ಹುಬ್ಬಳ್ಳಿ: ಧಾರವಾಡದ ಯುವತಿಗೆ ಅಪರಿಚಿತನೊಬ್ಬ ಸೈಬೀರಿಯನ್ ಹಸ್ಕಿ ತಳಿಯ ನಾಯಿಯನ್ನು ವಿದೇಶದಿಂದ ಮನೆಗೆ ತಲುಪಿಸುವುದಾಗಿ ನಂಬಿಸಿ, ಆನ್‌ಲೈನ್ ಮೂಲಕ 2.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ವಿದೇಶಿ ತಳಿಯ ನಾಯಿ ತರಿಸಿಕೊಡುವುದಾಗಿ ಯುವತಿಗೆ 2.25 ಲಕ್ಷ ರೂ. ವಂಚನೆ - Hubli Siberian Husky Dog
ಸೈಬೀರಿಯನ್ ಹಸ್ಕಿ ತಳಿಯ ನಾಯಿಯನ್ನು ವಿದೇಶದಿಂದ ಮನೆಗೆ ತಲುಪಿಸುವುದಾಗಿ ನಂಬಿಸಿ, ಯುವತಿಗೆ ಆನ್‌ಲೈನ್ ಮೂಲಕ 2.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ,
Siberian Husky Dog
ಧಾರವಾಡದ ಯುವತಿಯು ಹಸ್ಕಿ ತಳಿಯ ನಾಯಿ ಖರೀದಿಸಲು ಗೂಗಲ್ ಕ್ರೋಮ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಅದರಲ್ಲಿ ಸಂಪರ್ಕಕ್ಕಾಗಿ ದೊರೆತ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದಾಗ, ಅಶಿಶ್ ಹಂಡಾ ಎಂಬಾತ ಸೈಬೀರಿಯನ್ ತಳಿಯ ನಾಯಿಯನ್ನು ಕಾರ್ಗೋ ಫ್ಲೈಟ್ ಮೂಲಕ ಕಳುಹಿಸಿ, ಕಾನ್ಪುರ ಏಜೆನ್ಸಿ ಮೂಲಕ ಮನೆಗೆ ತಲುಪಿಸುವುದಾಗಿ ನಂಬಿಸಿದ್ದಾನೆ.
ನಂತರ ವಿವಿಧ ಚಾರ್ಜ್‌ಗಳ ರೂಪದಲ್ಲಿ ಮೇ 28ರಿಂದ ಜೂ. 3ರವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.