ಹಾವೇರಿ ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ 49 ಸೋಂಕಿತರು ಪತ್ತೆ - ಕೊರೊನಾ ವೈರಸ್
ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ ಹಾಗೂ ವೈದ್ಯರು ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ಇಂದು 49 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
![ಹಾವೇರಿ ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ 49 ಸೋಂಕಿತರು ಪತ್ತೆ Fourty nine corona cases found in Haveri district](https://etvbharatimages.akamaized.net/etvbharat/prod-images/768-512-04:55:31:1593516331-kn-hvr-03-49-positive-7202143-30062020164602-3006f-1593515762-317.jpg)
Fourty nine corona cases found in Haveri district
ಹಾವೇರಿ :ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 49 ಜನ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ಶಿಗ್ಗಾಂವಿಯಲ್ಲಿ 27, ರಟ್ಟೀಹಳ್ಳಿ ತಾಲೂಕಿನಲ್ಲಿ 15, ಹಾನಗಲ್ ತಾಲೂಕಿನಲ್ಲಿ 4 ಜನರಿಗೆ ಸೋಂಕು.
ಸವಣೂರು, ಹಾವೇರಿ, ರಾಣೆಬೆನ್ನೂರು ತಾಲೂಕಿನ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದೆ.
49 ಸೋಂಕಿತರ ಪೈಕಿ ಐವರು ಆಶಾ ಕಾರ್ಯಕರ್ತೆಯರು, ಓರ್ವ ಗ್ರಾಮ ಲೆಕ್ಕಾಧಿಕಾರಿ ಹಾಗೂ ಓರ್ವ ಖಾಸಗಿ ಆಸ್ಪತ್ರೆ ವೈದ್ಯನಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 118ಕ್ಕೆ ಏರಿದೆ.