ಕೊಪ್ಪಳ :ಜಿಲ್ಲೆಯಲ್ಲಿಂದು 14 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.
ಕೊಪ್ಪಳ 5, ಗಂಗಾವತಿ 1, ಯಲಬುರ್ಗಾ 2 ಹಾಗೂ ಕುಷ್ಟಗಿ ತಾಲೂಕಿನಲ್ಲಿ 6 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇಂದು ಪತ್ತೆಯಾದ 14 ಸೋಂಕಿತರ ಪೈಕಿ ಓರ್ವ ಜಿಂದಾಲ್ ಉದ್ಯೋಗಿ ಹಾಗೂ ಐದು ಜನ ಆರೋಗ್ಯ ಸಿಬ್ಬಂದಿಯಾಗಿದ್ದಾರೆ.
ಈ ಕುರಿತಂತೆ ಕೊಪ್ಪಳ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡ ಗ್ರಾಮದ 21 ವರ್ಷದ ಪುರುಷ (ಬೆಂಗಳೂರಿನಲ್ಲಿ ಬಿಬಿಎಂಪಿ ಆಸ್ಪತ್ರೆಯ ಸಿಬ್ಬಂದಿ), ಕುಕನೂರು ಪಟ್ಟಣದ 8 ವರ್ಷದ ಹೆಣ್ಣುಮಗು, ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದ 30 ವರ್ಷದ ಪುರುಷ, ಕಂಪಸಾಗರ ಗ್ರಾಮದ 30 ವರ್ಷದ ಪುರುಷ, ತಿಗರಿ ಗ್ರಾಮದ 26 ವರ್ಷದ ಪುರುಷ, ಕುಷ್ಟಗಿ ತಾಲೂಕಿನ ತಾವರಗೇರಾದ ಆರೋಗ್ಯ ಸಿಬ್ಬಂದಿಗಳಾದ 30 ವರ್ಷದ ಮಹಿಳೆ, 23 ವರ್ಷದ ಮಹಿಳೆ, 24 ವರ್ಷದ ಇಬ್ಬರು ಹಾಗೂ 34 ವರ್ಷದ ಪುರುಷ ಆರೋಗ್ಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಯಲಬುರ್ಗಾ ತಾಲೂಕಿನ ಶಿರೂರು ಗ್ರಾಮದ 34 ವರ್ಷದ ಪರುಷ, ಬಾಂಬೆ ಟ್ರಾವೆಲ್ ಹಿಸ್ಟರಿ ಇರುವ ಗಂಗಾವತಿ ನಗರದ 24 ವರ್ಷದ ಪುರುಷ, ಕೊಪ್ಪಳ ತಾಲೂಕಿನ ಹಂದ್ರಾಳ್ ಗ್ರಾಮದ ಜಿಂದಾಲ್ ಉದ್ಯೋಗಿ 25 ವರ್ಷದ ಪುರುಷ ಹಾಗೂ ಮೈನಳ್ಳಿ ಗ್ರಾಮದ 40 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಸದ್ಯ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ಮೂಲಕ ತಿಳಿಸಿದೆ.