ಕರ್ನಾಟಕ

karnataka

ETV Bharat / briefs

ಗದಗದಲ್ಲಿ ಇಂದು ಮತ್ತೆ ನಾಲ್ವರಿಗೆ ಕೊರೊನಾ.. 174ಕ್ಕೆ ಏರಿದ ಸೋಂಕಿತರ ಸಂಖ್ಯೆ - Corona updates

ಜಿಲ್ಲೆಯ ಸೋಂಕಿತರ‌ ಸಂಖ್ಯೆ 174ಕ್ಕೆ ಏರಿಕೆಯಾಗಿದೆ. ಒಂದೇ ವಾರದಲ್ಲಿ 100ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 3 ಜನ ಸೋಂಕಿತರು ಮೃತಪಟ್ಟಿದ್ದು, 53 ಜನ ಗುಣಮುಖರಾಗಿದ್ದಾರೆ..

Four Corona cases found in gadag district
Four Corona cases found in gadag district

By

Published : Jun 29, 2020, 10:06 PM IST

ಗದಗ :ಜಿಲ್ಲೆಯಲ್ಲಿ ಇಂದು ಮತ್ತೆ 4 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಶಿರಹಟ್ಟಿ ಪಟ್ಟಣದ 10 ವರ್ಷದ ಬಾಲಕಿಯೋರ್ವಳಿಗೆ (ರೋಗಿ -13269) ಇನ್‍ಪ್ಲೂಯೆಂಜಾ ರೋಗದ ಲಕ್ಷಣಗಳಿದ್ದ ಕಾರಣ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದ ವೇಳೆ, ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಹೀಗಾಗಿ ನಿನ್ನೆ ಪಾಸಿಟಿವ್ ಅಂತಾ ವರದಿ ಬಂದಿದೆ.

ಗದಗದ ತೇಜಾನಗರದ 61 ವರ್ಷದ ಪುರುಷ ರೋಗಿ-13270, ಕುರ್ತಕೋಟಿ ಗ್ರಾಮದ 36 ವರ್ಷದ ಪುರುಷ ರೋಗಿ-13271ಗೆ ಸೋಂಕು ದೃಢವಾಗಿದೆ. ಜೊತೆಗೆ ಮಹಾರಾಷ್ಟ್ರದಿಂದ ಆಗಮಿಸಿದ ಗದಗಿನ ಕೆಎಲ್‍ಇ ಕಾಲೇಜ್ ಹತ್ತಿರದ ನಿವಾಸಿ 21ವರ್ಷದ ಪುರುಷ ರೋಗಿ-13272ಗೆ ಸೋಂಕು ಇರುವುದು ದೃಢವಾಗಿದೆ.

ಜಿಲ್ಲೆಯ ಸೋಂಕಿತರ‌ ಸಂಖ್ಯೆ 174ಕ್ಕೆ ಏರಿಕೆಯಾಗಿದೆ. ಒಂದೇ ವಾರದಲ್ಲಿ 100ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 3 ಜನ ಸೋಂಕಿತರು ಮೃತಪಟ್ಟಿದ್ದು, 53 ಜನ ಗುಣಮುಖರಾಗಿದ್ದಾರೆ. 118 ಸಕ್ರಿಯ ಪ್ರಕರಣಗಳಿವೆ. ಸೋಂಕಿತರಿಗೆ ಜಿಮ್ಸ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದ್ದಾರೆ.

ABOUT THE AUTHOR

...view details