ಮುಂಬೈ:2004ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಸಿನಿಮಾವೊಂದರಲ್ಲಿ ನಟನೆ ಮಾಡುವ ಮೂಲಕ ಸಿನಿರಂಗಕ್ಕೆ ಡೆಬ್ಯು ಮಾಡಿದ್ದ ನಟಿಯೊಬ್ಬರು ಇದೀಗ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸಂಸತ್ ಮೆಟ್ಟಿಲೇರಿದ್ದಾರೆ.
2004ರಲ್ಲಿ ನಟ ದರ್ಶನ್ ನಟನೆಯ 'ದರ್ಶನ್' ಚಿತ್ರದಲ್ಲಿ ನವನೀತ್ ಕೌರ್ ರಾಣಾ ನಟನೆ ಮಾಡಿದ್ದರು. ಇದು ಅವರ ಮೊದಲ ಚಿತ್ರವಾಗಿತ್ತು. ಅದಾದ ಬಳಿಕ ಸುಮಾರು 25ಕ್ಕೂ ಹೆಚ್ಚು ತೆಲಗು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ನಟನೆ ಮಾಡಿದ್ದ ನವನೀತ್, ಈ ಸಲದ ಲೋಕಸಭೆಯಲ್ಲಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.