ಕರ್ನಾಟಕ

karnataka

ETV Bharat / briefs

ಮತ್ತೆ ಐವರಿಗೆ ಕೊರೊನಾ ಸೋಂಕು.. ಈವರೆಗೂ ರಾಯಚೂರಿನಲ್ಲಿ 96 ಮಂದಿ ಡಿಸ್ಚಾರ್ಜ್‌ - Raichur corona updates

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 383ಕ್ಕೆ ತಲುಪಿದೆ. ಈವರೆಗೆ 96 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Raichur
Raichur

By

Published : Jun 13, 2020, 8:04 PM IST

ರಾಯಚೂರು: ದಿನ ದಿನವೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಮತ್ತೆ ಐದು ಪಾಸಿಟಿವ್ ಪ್ರಕರಣ ದೃಢಪಟ್ಟಿವೆ.

ಮಹಾರಾಷ್ಟ್ರದಿಂದ ಮರಳಿದ ಮೂವರು ವಲಸೆ ಕಾರ್ಮಿಕರಿಗೆ, ಸೋಂಕಿತನ ಪ್ರಾಥಮಿಕ ಸಂಕರ್ಪ ಹೊಂದಿದ್ದ ಒಬ್ಬರಿಗೆ, ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಐವರು ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದ ದೇವದುರ್ಗ ತಾಲೂಕಿನ ಹನುಮನಾಯಕ ತಾಂಡದ (ಪಿ-6807) 30 ವರ್ಷದ ಮಹಿಳೆ ಹಾಗೂ (ಪಿ-6808) ಐದು ವರ್ಷದ ಬಾಲಕನಿಗೆ, ರಾಯಚೂರು ತಾಲೂಕಿನ ಮರ್ಚೇಡ್ ಗ್ರಾಮದ (ಪಿ-6809) 60 ವರ್ಷದ ಮಹಿಳೆ ಹಾಗೂ (ಪಿ-2423) ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ರಾಯಚೂರು ನಗರದ (ಪಿ-6810) 36 ವರ್ಷದ ವ್ಯಕ್ತಿಗೆ ಹಾಗೂ (ಪಿ-6806) 48 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಇದರಲ್ಲಿ ಪಿ-6806ಗೆ ಹೇಗೆ ಸೋಂಕು ತಗುಲಿದೆ ಎಂಬ ಮಾಹಿತಿ ದೊರೆತ್ತಿಲ್ಲ. ಈ ಕುರಿತಂತೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 383ಕ್ಕೆ ತಲುಪಿದೆ. ಈವರೆಗೆ 96 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದ 285 ಪ್ರಕರಣ ಸಕ್ರಿಯವಾಗಿವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details