ಕರ್ನಾಟಕ

karnataka

ETV Bharat / briefs

ಲಿಂಗಸುಗೂರು ತಾಲೂಕಿನಲ್ಲಿ ಮತ್ತೆ ಐದು ಕೊರೊನಾ ಕೇಸ್​ ಪತ್ತೆ - Lingasuguru corona updates

ರಾಯಚೂರಿನ ಲಿಂಗಸುಗೂರು ತಾಲೂಕಿನಲ್ಲಿ ಮತ್ತೆ ಐದು ಕೊರೊನಾ ಪ್ರಕರಣಗಳು ದಾಖಲಾಗಿವೆ.

Lingasuguru
Lingasuguru

By

Published : Jun 15, 2020, 7:18 PM IST

ಲಿಂಗಸುಗೂರು(ರಾಯಚೂರು):ತಾಲೂಕಿನಲ್ಲಿ ಒಂಭತ್ತು ತಿಂಗಳ ಮಗು ಸೇರಿದಂತೆ ಐದು ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗುಂತಗೋಳ ಗ್ರಾಮದ 9 ತಿಂಗಳ ಮಗು (ಮಹಾರಾಷ್ಟ್ರ), ಲಿಂಗಸುಗೂರಿನ ಇಬ್ಬರು ಸಹೋದರರು (ಆಂಧ್ರ ಪ್ರದೇಶ), ರೋಡಲಬಂಡ (ತವಗ), ಹಟ್ಟಿ ಚಿನ್ನದ ಗಣಿಯ ಒಬ್ಬ ವ್ಯಕ್ತಿ ಸೇರಿದಂತೆ ಐದು ಜನರಿಗೆ ಸೋಂಕು ದೃಢಪಟ್ಟಿದೆ. ಇವರನ್ನು ರಾಯಚೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೂನ್ 3ರಂದು ಗಂಟಲು ದ್ರವ ಪರೀಕ್ಷೆಗೆ ಇವರು ಒಳಗಾಗಿದ್ದರು. ಇವರ ವರದಿ ತಡವಾಗಿ ಬಂದಿದ್ದರಿಂದ ಎಲ್ಲರೂ ಅವರವರ ಗ್ರಾಮಗಳಿಗೆ ತೆರಳಿದ್ದರು ಎನ್ನಲಾಗುತ್ತಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಅಧ್ಯಯನ ಮಾಡುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ABOUT THE AUTHOR

...view details